Speech : Kannada – 3

ಕನ್ನಡ ಸಂಭಾಷಣೆ 

1. ಶಬೀರ್
2. ಜಾಸಿರ್

1. ನನ್ನ ಮನದ ಆಸೆಗಳು ಗರಿ ಗೆದರಿವೆ
2. ಏಯ್, ಇಲ್ಲಿ ಬಂದು ಏನು ಹಾಡುತ್ತಿಯ?
1. ಅದು ನನಗೊಂದು ಹಾಡು ನೆನಪಾಯ್ತು ಅಸ್ಟೇ.
2. ನಿಂತಲ್ಲು  ಕುಳಿತಲ್ಲೂ ಈ  ಹಲಾಕ್ನ  ಹಾಡಿಗೆ ಕಡಿವಾಣ ಹಾಕಬೇಕು.
1. ಇದು ಇಂದಿನ ಫ್ಯಾಶನ್ ಅಲ್ವಾ?
2. ನಿನ್ನ ಫ್ಯಾಶನ್ ನಿಂದಾಗಿ ಇಂದು ಎಲ್ಲವೂ ಆಧುನಿಕರಣವಾಗಿ ಬಿಟ್ಟಿದೆ.
1. ಮದರಸಕ್ಕೆ  ಬರುವಾಗ, ಮದುವೆಗೆ ಹೋಗುವಾಗ ಫ್ಯಾಷನ್ ಮಾಡಬಾರದು
2. ಅದು ಸಿನಿಮಾ, ಕ್ರಿಕೆಟ್ ತಾರೆಯರ ಸ್ಟೈಲ್ ಅಲ್ವಾ?
1. ಹೌದು, ಅವ್ರ ಸ್ಟೈಲ್ ನಿಂದಾಗಿಯೇ ಯುವ ಜನಾಂಗ ಆಕರ್ಷಿತ ರಾಗಿರುವುದು.
2. ಅವರ ವಸ್ತ್ರ ಧಾರಣೆ ಕೇಶ ವಿನ್ಯಾಸ ಎಲ್ಲರಿಗೂ ಇಸ್ಟ
1. ಜಾಸಿರ್, ಇಲ್ಲಿ ನೋಡು – ಅದು ನಮ್ಮ ಜೀವನಕ್ಕೆ ಬಾರಿ ಅಪಾಯಕಾರ್ಯ ವಾ?
2. ಹೌದು, ಅದು ಧಾರ್ಮಿಕ ಚಿಂತನೆ ಗಳಿಂದ ಜನರನ್ನು ದೂರ  ಸರಿಸುತ್ತದೆ.
1. ಹಾಗಾದರೆ ಅದು ನಾಮಧಾರಿಗಳಿಗೆ ಮಾತ್ರ ಇಷ್ಟ ಅಂತೀಯಾ?
2. ನೈಜ ಮುಸ್ಲಿಮರು ಫ್ಯಾಶನ್ ಮಾಡುವುದೇ ಇಲ್ಲ.
1. ಇದು ಧರ್ಮ ವಿರೋಧಿ ಸಂಸ್ಕೃತಿಯ – ಶಬೀರ್?
2. ಹೌದು ಇಸ್ಲಾಮಿಗೂ ಅಂತಹ ಸಂಸ್ಕೃತಿಗೂ ಸಂಬಂಧವಿಲ್ಲ.
1. ಹಾಗಾದರೆ ಸಲ್ಮಾನ್ ಖಾನ್ ಆಮಿರ್ ಖಾನ್ , ಶಾರುಕ್ ಖಾನ್ ,  ಏ  ಆರ್ ರೆಹ್ಮನ್ ದೊಡ್ಡ ಹೆಸರು ಗಳಿಸಿದರಲ್ಲ?
2. ಅವರು ಇಸ್ಲಾಂ ವಿರುದ್ಧ ಸಂಸ್ಕೃತಿಯಾದ ಸಿನೆಮಾ ದಲ್ಲಿ ಹೆಸರು ಮಾಡಿದ್ದಾರೆ ಅಸ್ಟೇ.
1. ಹಾಗಾದರೆ ಅವರಿಗೆ ಇಸ್ಲಾಮಿನಲ್ಲಿ ಸ್ಥಾನ ವಿಲ್ಲವೇ?
2. ಇಸ್ಲಾಂ ನಲ್ಲಿ ಸ್ಥಾನ ಬೇಕಾದರೆ ಸಿನಿಮೆ ಸಂಗೀತ ನೃತ್ಯ ಎಲ್ಲವನ್ನೂ ತ್ಯಜಿಸಬೇಕು
1. ಜಾಸಿರ್ ಈಗ ನನಗೆ ಅರ್ಥ ವಾಯಿತು – ಸಂಗೀತ ಸಿನಿಮಾಗಳು ಮುಸ್ಲಿಂ ಸಂಸ್ಕೃತಿ ಅಲ್ವಾ?
2. ಅದೆಲ್ಲವೂ ಇಸ್ಲಾಂ ಧರ್ಮ ಕಠಿಣವಾಗಿ  ನಿಷೇಧ ಗೊಳಿಸಿದ ಸಂಗತಿಗಳಾಗಿದೆ.
1. ಆದರೂ ಮುಸ್ಲಿಮರು ಅವರಿಗಾಗಿ ಮುಗಿ ಬೀಳುತ್ತಿದ್ದಾರಲ್ಲ
2. ನೋಡಿ ಶಬೀರ್ – ಕೆಟ್ಟ ಕಾರ್ಯ ಗಳಿಗೆ ಬೇಗ ಜನ ಸೇರುತ್ತಾರೆ
1. ಸಂಗೀತ ರಸಮಂಜರಿ ಮಾಡಿದರೆ ಸೇರುವಸ್ಟು ಜನ ಮೀಲಾದುನ್ನೆಬಿಗೆ ಸೇರುವುದಿಲ್ಲ ಅಲ್ವಾ?
2. ನೀನು ಹೇಳಿದ್ದು ಸರಿ. ಸಮಾಜದಲ್ಲಿ ಒಂದು ವಿಭಾಗ ಸಂಗೀತ ಪ್ರಿಯರಾಗಿದ್ದಾರೆ
1. ಇದನ್ನು ಹೇಗೆ ಪರಿಹಾರ ಮಾಡುವುದು?
2. ಸಾಧ್ಯ  ವಾದಸ್ಟು  ಧಾರ್ಮಿಕ ಜಾಗೃತಿ ಕಾರ್ಯಕ್ರಮ ನಡೆಸಬೇಕು
1. ಜಮಾ ಅತ್  ಕಮಿಟಿಗಳು ಇದಕ್ಕೆ ಮುಂದ್ದಾಗಬೇಕಿದೆಯಲ್ಲ
2. ಹೌದು, ಜಮಾ ಅತ್  ಕಮಿಟಿ ಮನಸ್ಸು ಮಾಡಿದರೆ ಯಾವ ಪರಿವರ್ತನೆ ಯು ಸಾದ್ಯ ವಿದೆ.
1. ಆ ಸಂದೇಶವನ್ನು ನಾವು ವೇದಿಕೆ ಇಂದಲೇ  ನೀಡೋಣ
2. ಮೀಲಾದುನ್ನಬಿ ಅದಕ್ಕೊಂದು ಪ್ರೇರಣೆ ಯಾಗಲಿ
1. ಅಸ್ಸಲಾಮು  ಅಲೈಕುಂ
2. ವಾಲೈಕುಂ ಸಾಲಾಮ್

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy