Speech: Kannada – 1

ಕನ್ನಡ ಭಾಷಣ 

ವೇದಿಕೆಯಲ್ಲಿ ಉಪಸ್ಥಿತರಿರುವ ಅಧ್ಯಕ್ಷರೇ ಉಸ್ತಾದರೇ ಸಭಿಕರೆ ನನ್ನ  ನೆಚ್ಚಿನ ವಿದ್ಯಾರ್ಥಿ ಮಿತ್ರರೇ. ಅಸ್ಸಲಾಮು ಅಲೈಕುಂ.

ಇಂದು ಜಗವಿಡೀ ನೆಬಿ  ಕರೀಮ್ ರಸೂಲುಲ್ಲಾಹಿ (ಸ. ಅ) ರವರ ಜನ್ಮದಿನಾಚರಣೆಯನ್ನು ಕೊಂಡಾಡುತ್ತಿದೆ. ಮಸೀದಿ ಮಿನಾರಗಳಲ್ಲಿ ಹಳ್ಳಿಗಳಲ್ಲಿ ಅವರ ಕೀರ್ತನೆಗಳ ಮಧುರ  ಧ್ವನಿ ತರಂಗಗಳು ಅಲೆ ಅಲೆಯಾಗಿ ಮಾರ್ಧನಿಸುತ್ತಿದೆ.  ಇಂತಹ ಸುಸಂದರ್ಭದಲ್ಲಿ ನಾವಿಲ್ಲಿಂದು ಒಗ್ಗೂಡಿದ್ದೇವೆ. ನಮ್ಮನ್ನು ಅಲ್ಲಾಹು ತಆಲ ಆ  ಪ್ರವಾದಿಯವರನ್ನು  ಪ್ರೀತಿಸುವವರ ಸಾಲಲ್ಲಿ ಸೇರಿಸಲಿ ಅಮೀನ್.
ಸ್ನೇಹಿತರೆ ರಸೂಲುಲ್ಲಾಹಿ (ಸ. ಅ)  ರವರ ಜನ್ಮದಿನಾಚರಣೆಯನ್ನು ಕೊಂಡಾಡುತ್ತಿರುವ ಈ ಸಮಯದಲ್ಲಿ ನಬಿಯವರ ಬಗ್ಗೆ ಕೆಲವು ವಿಷಯಗಳನ್ನು ಹೇಳಲು ಇಚ್ಚಿಸುತ್ತೇನೆ.  ಪ್ರೀಯರೇ ಅಲ್ಲಾಹು ತಆಲ ಅವನ ಕುರಾನಿನಲ್ಲಿ ಹೇಳುತ್ತಾನೆ ಸರ್ವಲೋಕಗಳಿಗೆ ಕರುಣೆಯಾಗಿಯಲ್ಲದೆ ತಮ್ಮನ್ನು ನಾವು  ಕಳಿಸಿಲ್ಲ.  ಮೇಲೆ  ಹೇಳಿದ ಆಯತ್ನ  ವಿಷಯಾರ್ಥ ವೆಂದರೆ  ರಸೂಲ್ ಕರೀಮ್‌ರವರು ಅತ್ಯಂತ ಕರುಣೆಯುಳ್ಳವರಾಗಿದ್ದರು.  ಶತ್ರುವಾಗಲಿ ಮಿತ್ರರಾಗಲೀ ಮುಸ್ಲೀಮನಾಗಲಿ ಆವಿಶ್ವಾಸಿಯಾಗಲಿ ಎಲ್ಲರಿಗೂ ಕ್ಷಮಾದಾನ ನೀಡುತ್ತಿದ್ದರು. ಎಸ್ಟೆಂದರೆ ಯುದ್ಧ ರಂಗದಲ್ಲಿ ಸ್ವತಹ ಬಂದಿಸಲ್ಪಟ್ಟ ಖೈದಿಗಳನ್ನು ಕೂಡ ಕ್ಷಮಿಸಿ ಬಿಟ್ಟಿದ್ದರು.ನೋಡಿರಿ ಸ್ನೇಹಿತರೆ ಈ ರೀತಿಯ ಕರುಣಾಮಯಿ  ಮಾದರಿ ವ್ಯಕ್ತಿತ್ವವನ್ನು ನಮಗೆ ಇತಿಹಾಸದಲ್ಲಿ  ಎಲ್ಲೂ  ಕಾಣಲು ಸಾಧ್ಯವಿಲ್ಲ.
ಸಹೋದರರೇ ಪ್ರವಾದಿ ರವರು ಕೇವಲ ಮನುಷ್ಯರೊಂದಿಗೆ ಮಾತ್ರವಲ್ಲ ಇತರ ಎಲ್ಲಾ  ಜೀವಿಗಳನ್ನು ಕರುಣೆಯ ಕಣ್ಣಿನಿಂದ ಕಾಣುತಿದ್ದರು.  ಒಂದು ದಿನ ಪ್ರವಾದಿವರು ಯಾರೊ  ಅನ್ಸಾರಿಯೊಬ್ಬರ ತೋಟಕ್ಕೆ ಪ್ರವೇಶಿಸಿದರು.  ಆ  ತೋಟದೊಳಗೆ ಒಂಟೆಯನ್ನು ಕಟ್ಟಿಹಾಕಲಾಗಿತು.  ನಬಿಯವರನ್ನು ಕಂಡಾಗ ಒಂಟೆಯು ಕಣ್ಣೀರು ಹಾಕುತ್ತ ಅಳತೊಡಗಿತು.  ಆಗ ಪ್ರವಾದಿರವರು ಒಂಟೆಯ ಬಳಿ ತೆರಳಿ ಅದರ ತಲೆಯನ್ನು ನೇವರಿಸಿ ಸಮಾಧಾನ ಪಡಿಸಿದರು.  ಅಲ್ಲಿಂದ ನೇರವಾಗಿ ಒಂಟೆಯ ಯಜಮಾನನ ಬಳಿ ತೆರಳಿ ಯಾಕೆ ಅನ್ಸಾರಿ ತಾವು ಅಲ್ಲಾಹಾನನ್ನು ಬಯಪಡುತಿಲ್ಲವೇ? ನಿಮ್ಮ ಒಡೆತನದಲ್ಲಿರುವ ಈ ಒಂಟೆಗೆ ನೀವು ಸರಿಯಾಗಿ ಆಹಾರ ನೀಡುತಿಲ್ಲವೆಂದು ಅದು ನನ್ನಲ್ಲಿ ದೂರುತ್ತಿದೆ ಎಂದು ಗಂಭೀರವಾಗಿ ಹೇಳಿದರು.
ನೋಡಿರಿ ಜನರೇ ನಾವಾದರೋ ಕಂಡು ಕಾಣದಂತೆ ನಟಿಸುವ ಕ್ಷುಲ್ಲಕ ವಿಷಯವೊಂದನ್ನು ನೆಬಿ (ಸ.ಅ) ಯವರು ಎಸ್ಟು ಗಂಭೀರವಾಗಿ ತೆಗೆದು ಕೊಂಡಿದ್ದಾರೆ. ಇದರಲ್ಲಿ ನಮಗೆ ಅನೇಕ ಪಾಠಗಳಿವೆ.  ಇನ್ನೊಂದು ಘಟನೆ ನೋಡಿರಿ –  ಮಕ್ಕ ಮುಶ್ರಿಕರು ನಬಿಯವರನ್ನು ತೀರ್ವವಾಗಿ ಉಪದ್ರವಿಸುತ್ತಿದ್ದರು ಆಗ ಅಲ್ಲಾಹನ ಮಲಕುಗಳು ನೆಬಿ  ಯವರ ಬಳಿ ಬಂದು ಓ  ಅಲ್ಲಾಹನ ರಸೂಲರೆ ತಾವು ಅನುಮತಿ ಕೊಡಿರಿ ನಾವು ಆ ಶತ್ರು ಸಮುದಾಯವನ್ನು ನಾಶಗೊಳಿಸುತ್ತೇವೆ ಎಂದು ಹೇಳಿದರು.  ಆಗ ಪ್ರವಾದಿವರ್ಯರು ಬೇಡ  ನೀವು ಅವರೊಡನೆ ಪ್ರತೀಕಾರ ತೀರಿಸಬೇಡಿ ಅವರ ಮುಂದಿನ ಪರಂಪರೆಯಲ್ಲಿ ಯಾರಾದರೂ ಇಸ್ಲಾಂ ಸ್ವೀಕರಿಸುವುದನ್ನು ನಾನು ಬಯಸುತೇನೆ ಎಂದು ಮರುತ್ತರ ಹೇಳುತಾರೆ.
ಸಹೋದರರೇ ಇದು ಪ್ರವಾದಿರವರ ಕರುಣಾಸಾಗರದಿಂದ ತೆಗೆದ ಎರಡು ಹನಿಗಳು ಮಾತ್ರ ಈ  ರೀತಿ ಅಪರಿಮಿತ ಘಟನೆಗಳು ನಬಿ (ಸ. ಅ) ರವರ ಬದುಕಿನಲ್ಲಿ ನಡೆದಿದೆ.  ಅಲ್ಲಾಹು ನಾಳೆ ನಮ್ಮನ್ನು  ಜನ್ನಾತುಲ್  ಫಿರ್ದ್ಹೌಸ್  ನಲ್ಲಿ  ಆ  ರಸೂಲರೊಂದಿಗೆ ಒಗ್ಗೂಡಿಸಲಿ ಆಮೀನ್ ಎಂದು ಪ್ರಾರ್ಥಿಸುತ ವಿರಮಿಸುತ್ತೇನೆ.

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy