1. ಜ಼ಮೀರ್
2. ನಜ಼ೀರ್
1. ನಜ಼ೀರ್ ಸುಖ ತಾನೇ? ಏನಿದೆ ವಿಶೇಷ?
2. ಅಲ್ಹಂದುಲಿಲ್ಲಾಹ್ ಚೆನ್ನಾಗಿದ್ದೇನೆ….
1. ಇತ್ತೀಚೀನಿಂದ ನೀನು ಮದ್ರಸಾಕೆ ಬರ್ತಾನೆ ಇಲ್ವಲ್ಲಾ?
2. ನನಗೆ ಸ್ಕೂಲ್‌ನಲ್ಲಿ ಕಾರ್ಯಕ್ರಮ ಇತ್ತು.
1. ಸ್ಕೂಲ್ ಕಾರ್ಯಕ್ರಮ ಇದ್ದರೆ ಮದ್ರಸಾಕ್ಕೆ ಬರಬಾರದ?
2. ಸ್ಕೂಲ್ಡೆಗೆ ಭರ್ಜರಿ ತಯಾರಿಯಲ್ಲಿದ್ದೇನೆ, ಪುರ್ಸೊತ್ತೆ ಇಲ್ಲಾ.!!!
1. ಛೇ! ಕೇವಲ ಒಂದು ಘಂಟೆ ಮಾತ್ರ ಇರುವ ಮದ್ರಸಾಕೆ ಅದೇಕೆ ಅಡ್ಡಿಯಾಗುತ್ತದೆ?
2. ನನಗೆ ವೇಷ ಹಾಕಲಿಕ್ಕಿತ್ತು. ಅದಕ್ಕಾಗಿ ತರಬೇತಿಯಲ್ಲಿದ್ದೇನೆ.
1. ಏನಂದಿ! ವೇಷ ಹಾಕುವುದಾ? ನೀನೊಬ್ಬ ಮುಸ್ಲಿಂ ಅಲ್ವಾ?
2. ಏನು! ಮುಸ್ಲಿಂ ಆದರೆ ವೇಷ ಹಾಕಬಾರದ?
1. ಹೌದು! ಮುಸ್ಲಿಮರು ಅಭಿನಯ ಮಾಡುವುದು ಕಟಿನ ಹರಾಮ್ ಆಗಿದೆ.
2. ಹಾಗಾದರೆ ಮುಸ್ಲಿಂ ವಿದ್ಯಾರ್ತಿ ವಿದ್ಯಾರ್ತಿನಿಯರು ಶಾಲೆಯಲ್ಲಿ ಅಭಿನಯಿಸುತ್ತಾರಲ್ಲ?
1. ನವೂದು ಬಿಲ್ಲಾಹ್! ಇಂತಹ ಸಂಸ್ಕೃತಿ ನಮ್ಮಲಿ ವ್ಯಾಪಕವಾಗುತ್ತಿದೆ.
2. ಛದ್ಮವೇಷ , ರೂಪಕ ಪ್ರದರ್ಶನ ಕೂಡದೆಂದು ಹೇಳ್ತೀಯಾ?
1. ಅದೇ ನಾನು ಹೇಳಿದ್ದು. ಎಲ್ಲಾ ರೀತಿಯ ನಾಟಕ, ಪ್ರಹಸನ, ಅಭಿನಯ ಎಲ್ಲವೂ ನಿಷಿದ್ದ.
2. ಹಾಗಾದರೆ ಬ್ಯಾರಿ ಭಾಷೆಯಾ ಸಂಸ್ಕೃತಿಯಲ್ಲಿ ನಾಟಕ, ಅಭಿನಯ ಇದೆಯಲ್ಲ?
1. ಅದು ಕೇವಲ ನಾಮಧಾರಿಗಳ ಹೀನ ಕೃತ್ಯ ವಾಗಿದೆ. ಅದಕ್ಕೂ ಇಸ್ಲಾಂ ಸಂಬಂಧವಿಲ್ಲ.
2. ಬ್ಯಾರಿ ಸಂಸ್ಕೃತಿಯ ಹೆಸರಿನಲ್ಲೂ ವಿಡಿಯೋ ಚಿತ್ರ ನಾಟಕ ಸಿನಿಮಾ ಬಿಡು ಗಡೆಯಾಗಿದೆಯಲ್ಲ?
1. ಸರ್ವ ಮುಸ್ಲಿಮರು ಅದನ್ನು ಕೊಂಡು ಕೊಳ್ಳಲೆ ಬಾರದು ಅದನ್ನು ವಿರೋಧಿಸಬೇಕು.
2. ಈಗ ನಾನೇನು ಮಾಡಬೇಕು ಹೇಳು.
1. ನೀನು ಇಂದಿನಿಂದ ಶಾಲೆಯಲ್ಲಿ ವೇಷ ಹಾಕುವುದನ್ನು ನಿಲ್ಲಿಸಬೇಕು.
2. ಶಾಲೆಗೆ ಹೋಗಬೇಡ ಎನ್ನುತ್ತೀಯಾ?
1. ಖಂಡಿತಾ ಇಲ್ಲ, ಶಾಲೆಗೆ ಹೋದರು ಅಲ್ಲಿನ ಕಾರ್ಯಕ್ರಮಗಳಲ್ಲಿ ಅಭಿನಯಿಸುದು ಬೇಡ.
2. ಆಯಿತು, ಈಗ ನನಗೆ ಇಸ್ಲಾಂ ಧರ್ಮದ ಮಹತ್ವ ತಿಳಿಯಿತು.
1. ನೀನಿನ್ನೂ ತಪ್ಪದೆ ಮದರಸಾಕೆ ಬರಬೇಕು
2. ಇನ್ ಶಾ ಅಲ್ಲಾಹ್ … ಇನ್ನು ನಾನು ಇಸ್ಲಾಂ ಧರ್ಮದ ಚೌಕಟ್ಟು ಮೀರುವುದಿಲ್ಲ
1. ಅಲ್ಹಂದುಲಿಲ್ಲಾಹ್, ನನ್ನ ಉಪದೇಶ ಫಲಿಸಿತು ಅಸ್ಟು ಸಾಕು
2. ಕ್ಷಣಿಕ ಸಂತೋಷಕ್ಕಾಗಿ ನಾನು ಧರ್ಮವನ್ನು ಮೀರಲು ತಯಾರಿಲ್ಲ
1. ಅಲ್ಲಾಹು ಅದಕ್ಕೆ ನಮಗೆಲ್ಲ ಅನುಗ್ರಹಿಸಲಿ, ಅಸ್ಸಲಾಮು ಅಲೈಕುಂ
2. ವಾಲೈಕುಂ ಸಾಲಾಮ್…….. ಆಮೀನ್ ಯಾ ರಬ್ಬಲ್ ಆಲಮೀನ್