ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ
ಹಾಂ ಮೀಮ್ ರಸೂಲವರೇ
ವಿಶ್ವದ ನೇತಾರವರೇ
ಕಾಣಲು ಆಸೆ ಏರಿದೆ
ಮನದಲ್ಲಿ ಇಂಗಿತ ಮೊಳಗಿದೆ
ಹಾಂ ಮೀಮ್ ರಸೂಲವರೇ
ವಿಶ್ವದ ನೇತಾರವರೇ
ಕಾಣಲು ಆಸೆ ಏರಿದೆ
ಮನದಲ್ಲಿ ಇಂಗಿತ ಮೊಳಗಿದೆ
ಕನಸು ಕಂಡೆ ನಾನು
ಆ ರೌಲದ ಚಿತ್ರವ ನೋಡಿ
(ಹಾಂ ಮೀಮ್ )
ಪ್ರೇಮಾ ಸಾ.. ಗರದಿ ಮುಳುಗಿ ಹೋದೆನು
ಮುತ್ತೀನಾ ಹುಡುಕಾಟಾಡಿ ಸೋತು ಹೋದೆನು
ಅಲ್ಲಾಹ್ ಎಂದು ನನ್ನಾ ಚಂದಿರನಾ ನೋಟಾ
ತಟ್ಟನೆ ತೌಫೀಕನ್ನು ದಯ ಪಾಲಿಸು ನಾದಾ
ಸಹಿಸದು ಮನವಿನ್ನು
ನೋಡದೆ ಹೂ ವದನಾವನ್ನು (2)
(ಹಾಂ ಮೀಮ್ )
ಶಾಂತಿ ಪ್ರೀತಿ ರೇಖೆ ತೋರಿದ ನೆಬಿಯವರು
ಬೆಳಕತ್ತ ಚಿತ್ತವ ಕರೆದ ಲೋಕಪ್ರವಾದಿಯು
ಅನ್ಯಾಯ ಅನೀತಿಯನ್ನು ದೂರ ಮಾಡಿದರು
ಸತ್ಯಾ ಸತ್ಯ ವೈತ್ಯಾಸ ತಿಳಿಸಿದರು
ಅತುಲ್ಯ ನಾಯಕರು ಅವರು
ಅನುಪಮಾ ವ್ಯಕ್ತಿಯು
(ಹಾಂ ಮೀಮ್ )