Jeevana Mojinali (ಜೀವನ ಮೋಜಿನಲಿ)

ಅಮ್ಮಾ….ಅಮ್ಮಾ….
ಅಮ್ಮಾ…ಅಮ್ಮಾ…

ಜೀವನ ಮೋಜಿನಲಿ… ಮೆರೆದೆ ತಲೆಬಾಗಿ.
ಕ್ಷಮಿಸು ಅಮ್ಮ ನೀ…ಬೇಡುವೆ ಶರಣಾಗಿ…2

ತಾಯಿಯ ನೋಯಿಸುತಾ….ಅಳುತಿರೋ ಪರದೇಸಿ..
ಕಾಲಿಗೆ ಬೀಳುವೆ ನಾ..ಕ್ಷಮೆಯನು ಯಾಚಿಸಿ…
                           (ಜೀವನ)

ಆ ಗರ್ಭದ ಉದರದಿ ನನ್ನನ್ನು ಕಾಯುತ ಕುಳಿತೆ ನೀ…
ಅಹಂಭಾವನೆ ಕೂಡಿರುವ ನಾನು ಮರೆತೆ ಆ ಪ್ರೀತಿ..

ನೋವಿನ ಸಾಲು ದಿನ ಎಣಿಸುತ್ತ ಮಮತೆಯ ತೋರುವೆ ನೀ…
ನೋಯಿಸಲೆಂದೆ ಹುಟ್ಟಿದೆ ನಾನು ನಾನೆಂತಹ ಪಾಪಿ..

“ಪುಣ್ಯವು ತುಂಬಿದ ಕಾಲಿಗೆ ಬಿದ್ದು ಕ್ಷಮೆಯ ಕೇಳುವೆ ನಾ..
ಶಿರವಾ ಸವರಿ ನನ್ನನ್ನು ನೀ ಕ್ಷಮಿಸುವೆಯಾ ಅಮ್ಮ.”2
                   
ಓ ಅಮ್ಮಾ………(ಜೀವನ)

ಈ ಭೂಮಿಯಲಿ ಒಮ್ಮೆ ನಾನು ಶವವಾಗಿ ಮುಗಿವೇ..
ಯಾರ್ಯಾರು ಆಸರೆಯು ಇಲ್ಲದ ಯಾತ್ರೆ ಹೋಗುವೆ..

ಆ ದಿನ ತಾಯೆ ನನ್ನನು ನೀನು ದೂರ ಸರಿಸದಿರು.
ನಾ ನೀಡಿದ ಆ ನೋವುನು ನೀನು ಅಂದು ಕ್ಷಮಿಸಿ ಬಿಡು…

“ಪರಲೋಕದ ಮೋಕ್ಷಕ್ಕಾಗಿ ನೀ ಬೇಡುವೆಯಾ ಅಮ್ಮ..
ಇಹಲೋಕದಿ ನಾ ನೀಡಿದ ನೋವನು ಮರೆಯುವೆ ಯಾ ಅಮ್ಮಾ”2
 
ಓ ಅಮ್ಮಾ………(ಜೀವನ)

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy