Twaha Nebiyavare (ತ್ವಾಹ ನೆಬಿಯವರೇ)

ತ್ವಾಹ ನೆಬಿಯವರೇ ಸ್ನೇಹ ನಿಧಿಯವರೇ
ಶಾಂತಿ ನಾಯಕರೆ ಧರ್ಮ ಬೊದಕರೇ

ಇದು ತ್ವಾಹ ರಸೂಲರ ಹಾಡು
ಆ ಹಾಡನೊಮ್ಮೆ ನೋಡು
ಆ ಹಾಡಲ್ಲುಂಟು ಬೀಡು
ಅದರಲ್ಲಿ ಸುಖ ಬೇಡು 2

ತ್ವಾಹ ನಬಿಯವರೇ…..

ತ್ಯಾಗ ಸಹನೆ ಧರ್ಮ ನೀತಿ ವಿಶ್ವಕ್ಕೆ ಸಾರಿದರು
ಮಾನವೀಯತೆ ಮಹಿಮೆ ಕರುಣೆ ಲೋಕಕ್ಕೆ ತೋರಿದರು 2

ಅಮರವಾಗಿ ಬೆಳೆದು ಬಂದ
ಪುಣ್ಯ ನಬಿಯರ ನಾಮವು
ಆ ಹಬೀಬರ ಪುಣ್ಯ ವಧನವು
ಕಾಣುವ ಸೌಭಾಗ್ಯವು

ಪ್ರೇಮ ಕವನ ಶಾಂತಿ ನಯನ
ಆ ಹಬೀಬರ ಮನದಲ್ಲಿ ಮುಳುಗೊಣ
ಸ್ನೇಹ ನೀತಿ ಧರ್ಮ ಸ್ಪೂರ್ತಿ
ಆ ರಸೂಲರ ಮದ್ ಹ ನ್ನು ಹೇಳೋಣ

ತ್ವಾಹ ನಬಿಯವರೇ…..

ಕಲ್ಲು ಮರವು ನಿರ್ಜೀವ ಸಹಿತ
ಸಲಾಮ್ ಹೇಳಿದವು
ಆ ಹಬೀಬರ ಧನ್ಯ ಸ್ಪರ್ಶ
ಹಿಮಾಯ  ಬಯಸಿದವು 2

ಪುಣ್ಯ ನೆಬಿಯರ ಮರಣ ವಾರ್ತೆ
ಕೇಳಿದ ಆ ನಿಮಿಷವೂ
ಕೋಟಿ ಕೋಟಿ ಕಣ್ಣ ಹನಿಗಳು
ರಕ್ತದೊಂದಿಗೆ ಇಳಿದವು

ಬಾಂಗ್  ಕರೆಯು ರತ್ನ ಧ್ವನಿಯು
ಗಂಟಲಲ್ಲಿ ನಾದ ನೀಡಿದವು.
ಮದೀನವೆಂಬ ಪುಣ್ಯ ಭವನ
ಹೊಲಸೆ ಹೊರಟು ಸಲಾಮ್ ಹೇಳಿದರು

ತ್ವಾಹ ನೆಬಿಯವರೇ….

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy