Nanna Pranavu Horatu Hoyitu (ನನ್ನ ಪ್ರಾಣವು ಹೊರಟು ಹೋಯಿತು)

ರೀಧಿ : ತರುಣೀ ಮಣಿ ಅಥವಾ ನನ್ನ ಆತ್ಮ ಜಡವ ತೊರೆದು 

ನನ್ನ ಪ್ರಾಣವು ಹೊರಟು ಹೋಯಿತು ನೀಡದೆ ಮುನ್ಸೂಚನೆ
ಅಂಗವೆಲ್ಲವೂ ಅಚಲವಾಯಿತು ನಿಂತು ಹೋಯಿತು ಚಾಲನೆ

ನನ್ನ ಮಲಗಿಸಿ ಹೊದಿಸಿ ಬಿಟ್ಟರು ಬಿಳಿಯ ಹೊದಿಕೆ ದೇಹಕೆ
ಮಡದಿ ಮಕ್ಕಳು ಬಂಧು ಮಿತ್ರರು ತಾಳದಾದರೂ ಅಗಲಿಕೆ

ದೂರ ದೂರಕೆ ಸುದ್ದಿ ತಲುಪಲು ಬಂದರೆಲ್ಲರು ಧಾವಿಸಿ
ಅಂತ್ಯ ವಿಧಿಯನು ಸಜ್ಜು ಗೊಳಿಸಲು ಬೆಂಚಲೆನ್ನನು ಮಲಗಿಸಿ

ಸ್ನಾನ ಮಾಡಿಸಿ ಎತ್ತಿ  ತಂದರು ಕಫನಿನಲ್ಲಿ ಹೊದೆಯಲು
ಸೆಂಟು ಸವರಿದ ಮೂರು ಬಟ್ಟೆಯಲ್ಲಿತ್ತು ನನ್ನನ್ನು ಕಟ್ಟಲು

ಸೂರ ಯಾಸೀನ್ ಪಠಿಸಿ ನಂತರ ಪಾಪ ಮುಕ್ತಿಗೆ ಪ್ರಾರ್ತನೆ
ಬಂದು ಮಿತ್ರರೀಗಾಯಿತಾಗಲೇ ಸಹಿಸಲಾರದ ವೇದನೆ

ಅಂತ್ಯ ಪಯಣಕೆ ಕಾದು  ನಿಂತಹ ಶವದ ಮಂಚದಿ ನನ್ನನ್ನು
ಇಳಿಸಿಕೊಳ್ಳುತ ಹೊತ್ತು ಹೆಗಲಲಿ ಕಬರಿನತ್ತ ನಡೆದರು

ಸೊತ್ತು ವಿತ್ತವು ಬಾಳಿದಾಮನೆ ತೊರೆದು ಎಲ್ಲವ ಹೋಗುವೆ
ತಿರುಗಿ ಬಾರದ ಪಯಣ ನನ್ನದು ಅಲ್ವಿದಾಯ ಹೇಳುವೆ

ಕಬ್ರ್ ಮಹ್ಶರ ದಲ್ಲಿ ನಿನ್ನ ಯ ಇಷ್ಟ ದಾಸರ ಕೂಟದಿ
ಸೇರಿಸೆಮ್ಮನು ಯಾ ಇಲಾಹನೆ  ನಿನ್ನ ಕರುಣೆಯ ನೋಟದಿ

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy