ನನ್ನ ಆತ್ಮ ಜಡವ ತೊರೆದು ಹೊರಟುಹೋಗಿದೆ
ಇಂದು ಮಯ್ಯಿತ್ತೆಂಬ ಅಪರ ನಾಮ ನನಗೆ ಲಭಿಸಿದೆ
ಚಲಿಸುತಿದ್ದ ಅಂಗವೆಲ್ಲಾ ಅಚಲ ವಾಗಿಹುದು ನನ್ನ
ಮರದ ಕೊರಡಿನಂತೆ ತನುವು ಮಂಜು ಗಟ್ಟಿದೆ
ಬಂದು ಬಳಗ ಇಸ್ಟ ಮಿತ್ರಾ ಎಲ್ಲ ಕೂಡಿಹರು
ನನ್ನ ನೆನೆದು ನೆನೆದು ಕನ್ನ ನೀರು ಹರಿಸುತಿರುವರು
ಆಗ ತಾನೇ ಬಂದ ಜನತೆ ಹೊದಿಕೆ ಸರಿಸುತ್ತ
ನನ್ನ ಮುಖವ ನೋಡ ಮತ್ತೆ ಹೊದಿಕೆ ಮುಚ್ಚುತ್ತಿರುವರು
ಅವರು ಕೂಡ ಇರುವಲೆಂದು ಬಯಕೆ ಇರುವುದು
ನಾನು ಆದರೇನು ಎಲ್ಲ ಯತ್ನ ವಿಫಲವಾಗುವು
ಮುತ್ತು ಮಗನು ಸನಿಹ ನಿಂತು ಅಳುತಲಿರುವನು
ಅವನು ಅತ್ತು ಅತ್ತು ಮುತ್ತು ಮಗಳು ಮೂರ್ಛೆ ಹೋದಳು
ಪ್ರಾಣ ಸಖಿಯು ದುಃಖವನ್ನು ತಡೆಯಲಾದಳು
ಅವಳು ಘಳಿಗೆ ಗೊಮ್ಮೆ ಭೋದವನ್ನು ಕಳೆದುಕೊಳ್ಳುವಲು
ಕಫನು ಬಟ್ಟೆ ಹತ್ತಿ ಸೆನ್ಟು ತರಿಸಿಯಾಯಿತು
ಕೆಲವರು ನನ್ನನು ಬೆಂಚಿಯಾ ಮೇಲೆ ಇಟ್ಟು ಆಗಿದೆ
ಸ್ನಾನ ಮಾಡಿ ನನ್ನ ಒಳಗೆ ಎತ್ತಿ ತಂದರು
ಅವರು ಕಫನ ಬಟ್ಟೆ ಮೇಲೆ ನನ್ನ ಇಳಿಸಿಕೊನ್ಡರು
ಮೂರು ತುನ್ಡು ಬಟ್ಟೆಯಲ್ಲಿ ನನ್ನ ಮಡಚುತ್ತಾ
ಅವರು ಮೂರು ದಾರದಿಂದ ಭದ್ರಾ ಕಟ್ಟಿ ಬಿಟ್ಟರು
ಮನೆಯ ಬಾಗಿಲಲ್ಲಿ ಮಂಚ ಕಾದು ಕುಳಿತಿದೆ
ನನ್ನನು ಅದರಲೆತ್ತ ನನ್ನ ತನವ ಇತ್ತು ಆಗಿದೆ
ಬಂಧು ಬಳಗವನ್ನು ಬಿಟ್ಟು ಅಗಲಿ ಹೋಗುವೆ
ಮತ್ತೆ ಬಾರದಿರುವ ಪಯಣವನ್ನು ನಾನು ಬೆಳೆಸುವೇ
ಅನ್ನ ನೀರು ನಿದ್ದೆ ತಣಿವು ಕಡಿಮೆ ಮಾಡದೆ
ನಾನು ಕಟ್ಟಿದನ್ತ ಮನೆಯ ನಿಂದು ತೊರೆದು ಹೋಗುವೆ
ಆಸ್ತಿ ಪಾಸ್ತಿ ವಸ್ತು ಓಡವೆ ಇತ್ತು ಹೇರಲ
ಇತ್ತು ಏನು ಫಲವ ಬರಿದು ಬಂದೆ ಚೆಲ್ಲಿ ಕೈಗಳ
ಹೇಳು ಗೆಳೆಯ ನೆಬಿಯು ನಮಗೆ ಅರುಹಲಿಲ್ಲವೇ
ಮತ್ತೆ ಯಾಕೆ ಯೋಚಿಸು ಭ್ರಮಾ ಲೋಕವ ನೀನು ಅಪ್ಪುವೆ
ಒಳಿತು ಕೆಡುಕು ಎಂಬ ಎರಡು ಮಾರ್ಗ ಇಲ್ಲಿದೆ
ನೀನು ಒಳಿತಿನಲ್ಲಿ ಸಾಗ ಮುಂದೆ ಜಯವು ಹಿತವಿದೇ
ರಬ್ಬೆ ನಿಮ್ಮ ರಕ್ಷಿಸುತ್ತಾ ಕಾಯು ದೇವನೆ
ಕೊನೆಯ ಪಯಣ ಸುಗಮ ಗೊಳಿಸು ನಮಗೆ ಕರುಣಿಸು ಅಲ್ಲಾಹ್