Naa Bareyo Kavite (ನಾ ಬರೆಯೋ ಕವಿತೆಯಲಡಗಿರೊ)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ನಾ ಬರೆಯೋ ಕವಿತೆಯಲಡಗಿರೊ
ಪ್ರಣಯವು ನಬಿಯವರಾ ಮೇಲೆ.
ನಾ ಹಾಡೊ ಹಾಡಿನ ರಾಗದಿ
ನುಡಿಸುವೆ ಪ್ರಣಯದ ಆ ಲೀಲೆ“..2

 (ನಾ ಬರೆಯೋ)

ಆ  ತೋರುವ ಪ್ರಣಯದಿˌˌˌ
ಬರೆಯುವ ಕವನದಿ
“ಸಾಲುಗಳೂ ನಬಿಯೂˌˌಕಾಣಲೂ ಹಂಬಲವೂ” ..2

ಎತ್ತಿದ ಕೈಯು ನಬಿಯೇˌˌˌ
ಶೂನ್ಯವೇ ಎಂಬ ಭಯವೇ..
ಅಳಿಯದ ಪ್ರೇಮ ನಿಧೀಯೆ..
ಆಶಿಕೀಗಳ ಮನವೇ..

ಯಾ ರಸೂಲಲ್ಲಾಹ್…..

(ನಾ ಬರೆಯೋˌˌˌˌˌˌˌˌˌನಾ ಬರೂಯೋ)

ಆ ಪುಣ್ಯ ಪಾದ ಸ್ಪರ್ಶದ
ಮಣ್ಣಿನ ಕಣವು ನಾನಲ್ಲ.
ಆ ಮುತ್ತಿನ ಪಾದಕೆ ರಕ್ಷೆಯು
ಆಗುವ ಭಾಗ್ಯವು  ನನಗಿಲ್ಲ……… 2

ಆ ಸನಿಹದಿ ಸೇವಕನಾಗೊ
ಪುಣ್ಯವು ನನಗೆ ನೀಡಿಲ್ಲಾ. …….. 2
ಈ ಪಾಪಿಯ ಮನದಿಂದ
ಆಸೆಯು ಎಂದಿಗೂ ಅಳಿಯೋಲ್ಲ..

ಅವರೂ ಇವರೂ ಹಲವರು ಕಂಡ
ಮದೀನವ ನಾ ಕಂಡಿಲ್ಲಾ…
ಭಾಗ್ಯವು ನನಗ್ಯಾಕಿಲ್ಲಾ….

(ನಾ ಬರೆಯೋ)

ಬರೆದೆಷ್ಟು ಕವನದ ಸಾಲು
ನಿಮ್ಮಯ ಪಾಲಿಗೆ ಅರ್ಪಿಸುವೆ.
ಬೆರೆಳೆಡೆಯಲಿ ಚೆಲ್ಲಿದ ಪದಗಳ
ಜೋಡನೆಯಲ್ಲೂ ವರ್ಣಿಸುವೆ……… 2

ಈ ಜೀವ ಮಣ್ಣಿನ ರುಚಿಯು
“ಸವಿಯುವ ಮುನ್ನಾ ಓ ನಬಿಯೇ…….. 2
ಈ ನಯನದಿ ಹರಿಯುವ ಹನಿಗೆ
ಉತ್ತರ ನೀಡಿ ಕಣ್ಮನಿಯೇ..

ಅವರೂ ಇವರೂ ಹಲವರು ಕಂಡ
ಮದೀನವ ನಾ ಕಂಡಿಲ್ಲಾ…
ಭಾಗ್ಯವು ನನಗ್ಯಾಕಿಲ್ಲಾ…
(ನಾ ಬರೆಯೋ)

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy