ಈ ಹಾಡಿನ ದಾಟಿ ಬೇಕಾದಲ್ಲಿ ಈ ಲಿಂಕನ್ನು ಕ್ಲಿಕ್ ಮಾಡಿ
ಮೈಸೂರ ವೀರ ಯೋಧರು ಟಿಪ್ಪು ಸುಲ್ತಾನರವರು
ಶಹೀದೆ ಮಿಲ್ಲತ್ತವರು ಈ ದೇಶಕ್ಕಾಗಿ ಮಡಿದವರು
ಭಾರತ ದೇಶವು ಸ್ವತಂತ್ರ ಪಡೆಯಲು ಹೋರಾಡಿದ ವೀರ ಹುಲಿಯವರೇ ||ಮೈಸೂರ||
ದೇಶದಿ ಶಾಂತಿಗಾಗಿ ಯುದ್ಧಗಳನ್ನೇ ನಡೆಸಿದ
ಅತೀ ಶ್ರೇಷ್ಟ ಸೇನಾನಿ ನೀವು ಕೇಳಿರಿ
ಬಿಳಿಯರೊಂದಿಗೆ ಸೆಣಸಾಡಿ ಪಿರಂಗಿಯನು ಪರಿಚಯಿಸಿ
ರಣರಂಗದಿ ಪ್ರಾಣ ತ್ಯಾಗ ಮಾಡಿದ ಕಲಿಯವರೇ
ಹಿಂದೂ ಕ್ರೈಸ್ತ ಮುಸಲ್ಮಾನ ಎನ್ನದೆ ಆಳ್ವಿಕೆ ಮಾಡಿದ ಸುಲ್ತಾನರೆ ||ಮೈಸೂರ||
ದೇವಸ್ಥಾನ ಮಂದಿರಗಳಿಗೆ ಮರಾಠರು ದಾಲಿತ್ತಾಗ
ರಕ್ಷಣೆಗೆ ಧಾವಿಸಿ ಬಂದ ಕೋಮು ಸೌಹಾರ್ದಕರೆ
ಕೆಂಪಂಗಿಗಳೊಂದಿಗಂದು ಸೋಲೊಪ್ಪೀದಾ ಕ್ಷಣವೂ
ಕರುಳ ಕುಡಿಯ ಒತ್ತೆ ಇಟ್ಟ ಮಹಾ ತ್ಯಾಗಿಯೂ
ರೈತ ಕಾರ್ಮಿಕ ಸೈನಿಕ ಹಕ್ಕನು ನೀಡಿದ ಕರುನಾಡ ಅಧಿಪತಿಯೇ..||ಮೈಸೂರ||