ಮನತುಂಬಿ ಮದೀನವ ನೆನೆದೆ
ಹಗಳಿರುಳು ನಿತ್ಯ ಸ್ವಲಾತು ನಾನಾದೆ
ಕರುಣೆಯ ಕಥೆ ಕೇಳಿ ಬರೆದೆ
ಮದ್ಹನ್ನು ತಿರುಪಾವನ ಸೇರಿಸುವ ಆಸೆ…
(ಮನತುಂಬಿ)
ಕಂಡಿಲ್ಲ ನಾನು ನನ್ನ ಹಬೀಬನ್ನು
ಕನಸಲ್ಲಿ ಒಂದು ಬಾರಿ…
ಕಂಡವರಿನ್ನು ಮರೆತಿಲ್ಲ ಎಂದು
ಆ ವಜ್ ಹನ್ನು ಒಂದು ಸಾರಿ
ಪುಣ್ಯ ಮದೀನ ಬಳಿಯಲ್ಲಿ ಹಕ್ಕಿಯ
ಮರಿಯಾಗಿ ಹುಟ್ಟಿದ್ದರೆ…
ಕುಬ್ಬದ ಮುತ್ತ ಸಾವಿರ ಸುತ್ತಲು
ವೃತ್ತವ ಬರೆಯುತ್ತಿದ್ದೆ
ನಿರಾಸೆ ನನ್ನ ಕಾಡಿದಯೆಂದು ದೂರದ ನೊವಲ್ಲಿಯೆ
ಬಲು ಆಸೆ ಮನ ಹೇಳಿದೆ ದಿನ
ಪಾವನ ತಲುಪಲು…
ದೂರದ ಮೈಲುಗಳು….
(ಮನತುಂಬಿ)
ಬದರ್ ಯುದ್ದ ವೀರ ಸ್ವಹಾಬರ
ವೀರಾಧಿರಾಜನಾಗಿ….
ಸೊಲುವ ಕ್ಷಣ ಗೆಲುವಿನ ದೈರ್ಯವ
ತರಿದಂತ ನಾಯಕಾಗಿ
ಅಲ್ಅಮೀನೆಂದು ಕುರೈಶಿ ಸಂಘದಿ
ಕರೆಯಿಟ್ಟ ಸತ್ಯಮಣಿ…
ಹಿಂಸೆಯ ಮುಂದೆ ಕರುಣಾದಿಶರಣಾಗಿ
ತಾಳ್ಮೆಯ ಸಹನೆ ದ್ವನಿ…
ಅರಿವನ್ನು ನೀಡಿ ನನ್ನ ಹಬೀಬರು ಲೊಕಕ್ಕೆ ಪಾಠವೆ
ಗುರಿಯನ್ನು ಸಾರಿ ಮುತ್ತು ತ್ವಬೀಬರು
ವಿಜಯಕ್ಕೆ ದಾರಿಯೆ…
ವಿನಯಕ್ಕೆ ಕ್ರಾಂತಿಯೆ…
(ಮನತುಂಬಿ)