Manasare Vadana (ಮನಸಾರೆ ವದನ ಪ್ರಶೊಭಿತ)

 

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ಮನಸಾರೆ ವದನ ಪ್ರಶೊಭಿತ ನೆಬಿಯರ
ಕನಸಲ್ಲಿ ಕಾಣುವ ಆಸೆ ಇದೆ
ಮನಸಾರೆ ತ್ವೈಬಾ  ಮದೀನವ ಕಾಣಲು
ಮನದಾಳದಾಸೆಯೂ ಮಿಡಿಯುತ್ತಿದೆ 

ಅನುದಿನವೂ ಸ್ಮರಿಸುವೆ ಯಾಸೀನ್ ನೆಬಿಯನೂ
ಅನುದಿನವೂ ಜಪಿಸುವೆ ತಿರು ಸ್ವಲಾತನೂ  ||2||
ಮನದಾಸೆಯನ್ನ್ ಈಡೇರಿಸಿರೀ

||ಮನಸಾರೆ||

ಚಂದ್ರ ನಾಚಿತಂದೂ
ಸೌಂದರ್ಯವ ಕಂಡು
ಸರೀಸಾಟಿ ಇಲ್ಲ ಅವರಿಗೆಂದೂ |2|

ಸಕಲ ಜಲಜಾಲದ ಸರ್ವ ಜೀವರಾಶಿಯ
ಸೃಷ್ಟಿಸಲು ಕಾರಣರು ತ್ವಾಹ ರಸೂಲ್|2|
ಯಾ ನೆಬಿ ಯಾ ಹಬೀ |2|
ಯಾ ಸಯ್ಯೆದಿ ಯಾ ಸನದೀ
ಯಾ ರಸೂಲಲ್ಲಾ ||ಮನಸಾರೆ||

ಮರಗಳ್ಹೇಳಿತಂದೂ ಯಾಸೀನ್ನಬಿಗೆಂದು
ಅಸ್ಸಲಾಂ ಅಲೈಕ ಯಾ ಸಯ್ಯೆದೀ
ಮಹ್ಶರದಾ ಸಭೆಯಲಿ  ಹೊತ್ತಿಉರಿವ ಬಿಸಿಲಲಿ
ಅರ್ಶಿನಾ ನೆರಳ ನೀಡಿ ಯಾ ನೆಬಿ

ಸಕಲ ಜಲಜಾಲದ ಸರ್ವ ಜೀವರಾಶಿಯ
ಸೃಷ್ಟಿಸಲು ಕಾರಣರು ತ್ವಾಹ ರಸೂಲ್|2|

ಯಾ ನೆಬಿ ಯಾ ಹಬೀ |2|
ಯಾ ಸಯ್ಯೆದಿ ಯಾ ಸನದೀ
ಯಾ ರಸೂಲಲ್ಲಾ ||ಮನಸಾರೆ||

Credit : Afeez KuppettyLeave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy