Manasare Punya Madeena (ಮನಸಾರೆ ಪುಣ್ಯ ಮದೀನಾದ)

ಮನಸಾರೆ ಪುಣ್ಯ ಮದೀನಾದ ರಾಜರ 
ಮದ್ ಹನ್ನು ಹಾಡುವೆನು ತ್ವಾಹಾ ರಸೂಲ್
ಹೃದಯಾಂತರಾಳದಲಿ ಹನಿಯಾದ ಒರತೆಗಳ 
ಧ್ವನಿಯಾಗಿ ಚೆಲ್ಲುವೆನು ಖಾತಿಂ ರಸೂಲ್ (2)
ಹಗಳಿರುಳು ಧ್ಯಾನ, ಹಾಶಿಂ ನೆಬೀನಾ
ಜಪಿಸಿದೆನು ದರ್ಶಿಸಲು, ತ್ವೈಬಾ ಮದೀನಾ
ಅನುರಾಗಿಯಲ್ಲ, ಅಸ್ ಅಲು ಬಿಲ್ಲಾಹ್..
ಕಣ್ಣಾರೆ ಕಾಣಿಸು, ಆ ಧನ್ಯ ರೌಳಾ (2)
ಪೌರ್ಣಮಿಯ ಖಮರು, ಆಶಿಖರ ತವರು
ನಮ್ಮೆಲ್ಲ ಯಾತನೆಗೆ ಪರಿಹಾರ ಅವರು
ಎರಡಾಯ್ತು ಪದರು, ನಡೆದೋಯ್ತು ಶಜರು
ಜಗದೆಲ್ಲ ಸೃಷ್ಟಿಗೆ ನಾಯಕರು ಅವರು
ಮನಸಾರೆ ಪುಣ್ಯ ಮದೀನಾದ ರಾಜರ 
ಮದ್ ಹನ್ನು ಹಾಡುವೆನು ತ್ವಾಹಾ ರಸೂಲ್
ಹೃದಯಾಂತರಾಳದಲಿ ಹನಿಯಾದ ಒರತೆಗಳ 
ಧ್ವನಿಯಾಗಿ ಚೆಲ್ಲುವೆನು ಖಾತಿಂ ರಸೂಲ್ (2)
ಶಾಂತಿಯ ಸಮರ, ಕ್ರಾಂತಿಯು ಅಮರ
ನಬಿಯವರ ಚರಿತೆಗಳು, ಇಂದೂ ಸುಮಧುರ
ಮರುಭೂಮಿ ಮರಳು, ಖರ್ಜೂರ ನೆರಳು
ಸ್ಮರಿಸುತಿದೆ ತ್ವಾಹಾರು ನಡೆದಾ ದಿನಗಳು. (2)
ಪೌರ್ಣಮಿಯ ಖಮರು, ಆಶಿಖರ ತವರು
ನಮ್ಮೆಲ್ಲ ಯಾತನೆಗೆ ಪರಿಹಾರ ಅವರು
ಎರಡಾಯ್ತು ಪದರು, ನಡೆದೋಯ್ತು ಶಜರು
ಜಗದೆಲ್ಲ ಸೃಷ್ಟಿಗೆ ನಾಯಕರು ಅವರು
ಮನಸಾರೆ ಪುಣ್ಯ ಮದೀನಾದ ರಾಜರ 
ಮದ್ ಹನ್ನು ಹಾಡುವೆನು ತ್ವಾಹಾ ರಸೂಲ್
ಹೃದಯಾಂತರಾಳದಲಿ ಹನಿಯಾದ ಒರತೆಗಳ 
ಧ್ವನಿಯಾಗಿ ಚೆಲ್ಲುವೆನು ಖಾತಿಂ ರಸೂಲ್ (2)
Credits : Naufal Marzooqi Shirlal

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy