ಮನದೊಳಗೆ ಪ್ರೇಮ ಹೆಚ್ಚುತಿದೆ
ಪುಣ್ಯ ಮಣ್ಣಿಗೆ ತಲುಪಲು ಆಸೆ ಇದೆ…
ಪಾಪವು ಜೀವನ ದಾರಿಯಲಿ
ಪರಿಹಾರ ಮದೀನದ ಮಡಿಲಿನಲೀ…
ನನ್ನ ನೆಬಿ.. ಪ್ರೇಮ ಲೋಕದಲಿ..
ಇರುಳಾರಿಸಿ ಬರುವಾ ಪ್ರಭೆಯು ನಿಧಿ..
ಆ ಮುಖ ಚಂದಾ ಕನಸಿನಲಿ
ಬರುವಾ ದಿನವಾ ನಾ ಕಾಯುತಲೀ….
ತ್ಯಾಗದಿ ಜೀವನವೂ……. ಕಾರುಣ್ಯ ಪ್ರತೀಕವದೂ……
ಅಜ್ಞಾನದ ಲೋಕದಲೀ….. ವಿಜ್ಞಾನವ ತುಂಬಿದರೂ…….
(ಪಲ್ಲವಿ)
ಪುಣ್ಯ ಮಕ್ಕಾ….ನಾಡಿನಲ್ಲೀ….
ಉದಿಸಿ ಬಂದಾ….ತ್ವಾಹಾ….
ಮಂದಹಾಸಾ….. ಬೀರುತಲೀ….
ಶತ್ರುಮನದೀ……ರಾಹಾ….
ಅಂತ್ಯ ದೂತರಾಗಿ ಬಂದ ಖಾತಿಮುನ್ನಬೀ……
ಸತ್ಯವನ್ನೇ ನುಡಿದು ಬಂದ ಅಲ್ ಅಮೀನ್….
ಪ್ರೇಮಿಗಳ ಮನದೊಳಗೆ ತುಂಬಿದಾ ನಬೀ…..
ಲೋಕವೆಲ್ಲಾ ಹಾಡಿ ಹೊಗಳುವಾ ನಬೀ…..
ಉನ್ನತಿಯಲ್ಲಿ ಉತ್ತಮರಾದ
ವರ್ಣಿಸಲಾಗದ ಅಂದದ ಶೋಭೆ…..
(ಪಲ್ಲವಿ)
ಪೌರ್ಣಮಿಯು….. ನಾಚುತಿರುವ….
ಚಂದ ವದನಾ…. ತ್ವಾಹಾ….
ನೀಲಗಗನಾ…. ತೇಲುತಿರುವಾ…
ತಾರೆಗಳೂ….ನೂರಾ…….
ಸ್ನೇಹ ರಾಗದ ಲೋಕದಲ್ಲೂ ರಾಜರೂ ನಬೀ……
ಮನದೊಳಗಿನ ಮಿಡೀತವೂ ಮದ್ಹುನ್ನಬೀ……
ಸೌಮ್ಯ ಗುಣದೀ ಜೀವನವ ಕಂಡರೂ ನಬೀ…..
ಸತ್ಯ ನೀತಿ ಹರಿಯುವ ನದಿಯೋ ನಬೀ…..
ಉನ್ನತಿಯಲ್ಲಿ ಉತ್ತಮರಾದ
ವರ್ಣಿಸಲಾಗದ ಅಂದದ ಶೋಭೆ……
(ಪಲ್ಲವಿ)