Madeenada Munavvaradi (ಮದೀನಾದ ಮುನವ್ವರದಿ)

ಮದೀನಾದ ಮುನವ್ವರದಿ
ಮುತ್ತುಪಾದ ಮಣ್ಣಿನಲ್ಲಿ
ಸ್ನೇಹರಾಜ ನನ್ನ ಕನಸು ಕಣ್ಣ ಮರೆಯಲ್ಲಿ
ಲೋಕರಕ್ಷೆ ಯಾ ಹಬೀಬೆ
ನಾಯಕಾ ನೀವೆ ತ್ವಬೀಬೆ
ಜ್ಞಾನ-ವಿಜ್ಞಾನವನು ದಾಟಿದ ಕಾಣದ ಜಗಕೆ
ಮನದ ಮಾತು ಒಂದೆ ನೆಬಿಯೆ
ದಿನಸ್ವಲಾತು ಅದುವೆ ನಿಧಿಯೆ
ನನ್ನ ಆತ್ಮಕೆ ಶಾಂತಿ ದೊರಕುವ ಅಕ್ಷರವು ನೀವೆ
ದಿನವು ರಾತ್ರಿ ಸುಜೂದಲ್ಲಿ
ಕೈಯ ತೆರೆದು ರಬ್ಬಿನಲ್ಲಿ
ಕೇಳುವೆ ನನ್ನಾ ಹಬೀಬರ ದರ್ಶನಾ ಭಾಗ್ಯ

ಹಲವು ಪ್ರೇಮಿಗಳಾ ಮದೀನವ
ನೊಡಲೇಬೇಕು……
ನೋವು ಹಿಡಿದಿಹ ಹೃದಯ ಸನಿಹಕೆ
ತ್ವಾಹ ಬರಬೇಕು -2
                                 (ಮದೀನಾದ)

ನೆಬಿಯರೆ ತಮ ಪುಣ್ಯನಾಮ
ಜಪಿಸುತಾ ಹರಡಿದೆ ಪ್ರೇಮ
ಸಾಲದು ಹಲವಾರು ಬಾರಿ ನುಡಿಯಲೇಬೇಕು
ತಪ್ಪು ಮರಳಿ ಮನದಿ ಬೆರೆತು
ಮುಪ್ಪು ಹಿಡಿಯುವ ಕಾಲ ಬಂತು
ಕಪ್ಪು ಸೇರಿಹ ಹೃದಯದಂಚಿಗೆ ಶಕ್ತಿ ನೀಡುವಿರಾ
ಸುಂದರ ಮದೀನದಲ್ಲಿ
ಚಂದಿರ ಪಾವಾನದಲ್ಲಿ-2
ಪಾಪಿಯಾಗಿಹ ದೊಶಿಯ
ನೋಟವು ಬೀರಿದೆಯೊ
ತಲುಪುವ ಕಾತುರ ಮಿಗಿಲೊ
ತೆರೆದಿದೆಯೊ ತಿರು ಬಾಗಿಲೊ…..
                                  (ಮದೀನಾದ)

ತಮ್ಮ ವರ್ಣನೆ ಮುಗಿಯದೆಂದು
ಅಮ್ಮ  ನೀಡಿದ ಪಾಠವಂದು
ಕೇಳಿ-ಕೇಳಿ ಕಲಿತು ನಾನು ಬರಹ ಬರೆದಿಹೆನು
ಮದ್ಹ್ ಬರೆದು ಪುಟವು ಸರೆದು
ಆಗ್ರಹ ಮದೀನ ಬಿಂದು
ಹೊಂದುವೆ ನನ್ನ ಮರಣವು ನೆಬಿಯರೆ ಬಂದು
ಕನಸು ನನಸಾಗುವ ಮುನ್ನ
ತೋರಬೇಕು ತಿರು ಮದೀನಾ-2
ನಾಥನ ಅನುಗ್ರಹವ ನಾ ಕಾಯುತಲೆ ಇರುವೆ
ನಾಳೆ ಮಹ್ ಷರ ಬರುವೆ
ನಫ್ಸಿ ಎಂದು ನಾ ನುಡಿವೆ……
                                      (ಮದೀನಾದ)

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy