Kanmani Twaha (ಕಣ್ಮಣಿ ತ್ವಾಹ ನೆಬಿಯುಲ್ಲಾ )

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ಕಣ್ಮಣಿ ತ್ವಾಹ ನೆಬಿಯುಲ್ಲಾ
ಕರುಣಾಮಯಿಹೇ ಸ್ವಲ್ಲಲ್ಲಾ
ಖೈರುಲ್ ವರಾ ಫಲುಲುಲ್ಲಾ
ಖಾತಿಮುನ್ನೆಬೀ ನೂರುಲ್ಲಾ (೨)

ಹಸ್ಬಿ ರಬ್ಬಿ ಜಲ್ಲಲ್ಲಾಹ್
ಮಾಫಿ ಖಲ್ಬಿ ಖೈರುಲ್ಲಾಹ್
ನೂರ್ ಮುಹಮ್ಮದ್ ಸ್ವಲ್ಲಲ್ಲಾ ಹ್ 
ಲಾಇಲಾಹಾ ಇಲ್ಲಲ್ಲಾಹ್

ಸುಂದರ ವಧನ ಆ ಸೊಬಗೂ
ಅಂದದ ನಯನದೀ ಆ ಮೆರುಗು
ಮಂದಮಾರುತ ನಾಚಿಹುದು
ಅಂದದ ಸವಿಮಾತಿನ ಎದುರೂ(2)

ಎಂತ ಶತೃ ಸೋತಿಹನೂ
ಸತ್ಯ ಸಂದದತಿಯಾ ಎದುರು
ಅಂಧಕಾರವೂ ನೀಗಿದವೂ
ಖಾತಿಮುನ್ನೆಬಿ ನೂರುಲ್ಲಾಹ್ ..

(ಕಣ್ಮಣಿ ತ್ವಾಹ ನೆಬಿಯುಲ್ಲಾ )
(ಹಸ್ಬಿ ರಬಿ ಜಲ್ಲಲ್ಲಾಹ್)

ಶಿಕ್ಷಣ ಬದುಕು ನಮ್ಮುಸಿರು
ಶಿಕ್ಷಿತ ವರ್ಗ ನಮ್ಮೂರು
ಶಾಸ್ವತ ವಲ್ಲ ಈ ಬದುಕೂ
ಸಾರಿ ಹೇಳಿದರೂ ಅವರು (೨)

ಶಾಂತಿ ನೀತಿಯ ಶ್ರೇಷ್ಟ ದೊರೇ
ಸಾಹೋದರ್ಯತೆ ಯಾಚಗರೇ
ಸೌಭಾಗ್ಯವೇ   ಬಾ ಜನರೇ
ಖಾತಿಮುನ್ನೆಬೀ ನೂರುಲ್ಲಾ..

(ಕಣ್ಮಣಿ ತ್ವಾಹ ನೆಬಿಯುಲ್ಲಾ )
(ಹಸ್ಬಿ ರಬಿ ಜಲ್ಲಲ್ಲಾಹ್)

ಗುಂಬಝ್ ಘಝುರಾ ವನ್ನೋಡು
ನಸೀಬು ನಮಗೆ ನಿ ನೀಡು
ನಯನ ಮನೋಹರ ವದನವದು
ನೋಡೋ ಭಾಗ್ಯ ನೀಡೊಡೆಯಾ (೨)

ಅಗಣಿತ ಪಾಪಗಳ ಮೋಕ್ಷಾ,
ಅನನ್ಯ  ಶ್ರೇಷ್ಠರ ಮಹಿಮೆಯಿಂದಾ
ಅರ್ಹನೇ ನಮಗೆ ನೀಡಲ್ಲಾಹ್
ಖಾತಿಮುನ್ನೆಬೀ ನೂರುಲ್ಲಾ…

(ಕಣ್ಮಣಿ ತ್ವಾಹ ನೆಬಿಯುಲ್ಲಾ)
(ಹಸ್ಬಿ ರಬ್ಬಿ ಜಲ್ಲಲ್ಲಾಹ್)

Author: Admin

Leave a Reply

Your email address will not be published.