ಕೈಗಳ ಚಾಚುತ್ತಾ
ಬೇಡುವೆವು ನಿನ್ನಲ್ಲಿ
ಕೊರೋನಾದ ಭೀತಿಯಿಂದ
ರಕ್ಷಿಸು ದೇವಾ
ನಿನ್ನಿಂದಲೇ ಜಗಕೆ ಅಭಯವು
ನೀಡು ಆರೋಗ್ಯ
ಬೇಡುವೆವು ನಿನ್ನಲ್ಲಿ
ಕೊರೋನಾದ ಭೀತಿಯಿಂದ
ರಕ್ಷಿಸು ದೇವಾ
ನಿನ್ನಿಂದಲೇ ಜಗಕೆ ಅಭಯವು
ನೀಡು ಆರೋಗ್ಯ
ನಿನ್ನ ಪರೀಕ್ಷೆಗೆ ಸಾಕ್ಷಿಯಾಗಿ
ಲೋಕವ ಕಾಣುತಿರುವೆವು
ರೋಗದ ಭೀತಿಯಲ್ಲಿ
ಜಗವೇ ನಿಂತಿದೆ
ಇಂದು ಹೊರಬಾರದ ಸ್ಥಿತಿಯಲ್ಲಿ
ಕೂಗುತಿರುವೆವೂ…
ಬಲಿಷ್ಟರೆಂದು ಮೆರೆದವರೂ
ದುರ್ಬಲರೇ ಭೂಮಿಯಲ್ಲಿ
ಮಹಾಮಹಿಮನ ಶಕ್ತಿ ಮುಂದೆ
ತೃಣ ಸಮಾನರು
ಕಣ್ಣಿಗೆ ಕಾಣದ ವೈರಸಿಂದ
ಸೋತು ಹೋದರು
ಬಡವನ ಮರೆಯುತ್ತಾ
ಶ್ರೀಮಂತಿಕೆ ಮೆರೆಯಲು
ಆಪತ್ತಿನಿಂದ ಸೊತ್ತು
ರಕ್ಷಿಸ ಬಹುದೇ?
ನಾಳೆ ದೇವನ
ಶಿಕ್ಷೆಯಿಂದ ರಕ್ಷೆ ಸಿಕ್ಕಿತೇ..?
ದುರಂತಗಳು ಪಾಠ ಕಲಿಸಲು
ಅರಿಬೇಕು ಮಾನವರು
ದೇವ ನಿಯಮವ ಮೀರಿ
ನಡೆಯದಿರು ಇಲ್ಲಿ
ನಾವು ಜಾತಿ,ಧರ್ಮದ ಭೇದ ಮರೆತು
ಪ್ರೀತಿಯಿಂದ ಬಾಳೋಣಾ
*✍ಆಯಿಷಾ ಯು. ಕೆ*