Ishkina Hani (ಇಷ್ಕಿನ ಹನಿ ಸಾಲುಗಳ )

ಇಷ್ಕಿನ ಹನಿ ಸಾಲುಗಳ ಮುಂದು
ಸ್ನೇಹವ ನುಡಿಯುವೆನು ನಾನೆಂದು……..||2||
ಜಗದಗಲ  ಸೃಷ್ಟಿಯ ಕಾರಣವು ತಾವು
ತಮ್ಮ ಅನುಚರರಿಗು ಅನುಕರಿಣೆ  ನೀವು||2||

ಮಾದರಿ ಜೀವನ ,ಇರುಜಗಕ್ಕಾಶ್ರಯ
ಮಣ್ಣಾಗುವ ಮುನ್ನಾ,ಅನುದಿನದ ತವಕ||2||
ಈ ಜೀವ ಪೂರ್ತಿ ತಮ್ಮ ಗೆರೆ ಗೀಚುವೆ
ಅಭಿಲಾಷೆಯು,ಅನುರಾಗ ಪ್ರೇಮಾ ಕಥೆ
ಅಸ್ಸಲಾಂ…ವಸ್ಸಲಾಂ…ಯಾ ಹಬೀಬೆ ಖುದಾ
ಆಶಿಕನು ಹಾಡುವೆನು,ಖಾತಿಮುಲ್ ಅಂಬಿಯ …….||2||

ಮುಗಿಯದ ಪ್ರೇಮವು ಅನುರಾಗ ಆನಂದವು
ಮುಗಿಯದಾ ವ್ಯಥೆಯಲ್ಲಿ  ಕಲ್ಮಶಾ ಮನವು||2||

ಸ್ವಹಾಬರು ಹಾಡಿದ ಸ್ನೇಹ ಗೀತೆಯಲ್ಲಿ
ಈ ಪಾಪಿಗೆ ಸರಿಯಾಗೋ ಸಾಲಿಲ್ಲ

ಕಾತುರದಿ, ಕಾಯುವೆನು,ಕರಗಳೆತ್ತಿ ಬೇಡುವೆನು
ಒಮ್ಮೆ ಆ ಮದೀನಾ ಮಣ್ಣು ತಲುಪಲು||2||

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy