ಸಾಹಿತ್ಯ : ಮುನವ್ವರ್ ಜೋಗಿಬೆಟ್ಟು
ಗಾಯನ :
ಹನಿಯುಕ್ಕುವ ಪ್ರೇಮ ಪ್ರಭಾತ
ಎದೆಯೊಳಗೆ ಇಶ್ಕಿನ ಕೊರಳ ಪ್ರಲಾಪ
ಕಣ್ಣಿನ ಹಸಿವೆಗೆ ದೂರ
ಹಬೀಬನ್ನು ನೆನೆಯುವ ಮನವಿಂದು ಭಾರ
ಕ ಅಬರ ಕವಿತೆಯು ಹತ್ತಿರ ಹತ್ತಿರ
ತಿವಿಯುತ್ತಾ ನಿಂತಾಗ
ಮನದಲ್ಲಿ ನೋವಿನ ಅಲೆಯೊಂದು
ಉಕ್ಕುತ್ತಾ ಆಜ್ಞೆಯ ಕೊಟ್ಟಾಗ
ಕತ್ತಿಯ ಝಳಪಿಸಿ ಶಿರವನ್ನು
ಹುಡುಕುತ್ತಾ ಸ್ವಹಾಬ ಹೊರಟಾಗ
ನಾಕದ ಸನ್ನಿಧಿ ಹುಡುಕುತ್ತಾ
ಬಳಿಗೆ ಮಹಿಳೆಯು ಬಂತಾಗ
ಜಗದಗಲ ಸಿಗದ ಹರಿತ ಖಡ್ಗವ
ಹೋಲಿಸಿ ಬರೆದಾಗ
ಅಖಿಲಾಂಡ ಭುವಿಯ
ಮೇರು ಕವಿಯ
ಪ್ರಾಸ ಹರಿದಾಗ
ಶಾಲಿನ ಸನ್ಮಾನವೂ
(ಹನಿಯುಕ್ಕುವ ಪ್ರೇಮ ಪ್ರಭಾತ)
ರಾಗದಿ ಹಾಡಲು ಎಷ್ಟೊಂದು ಎಷ್ಟೊಂದು
ಮದ್ಹಿನ ಸಾಲುಗಳು
ಕೋಗಿಲೆ ಕಂಠವು ಸೋಲುವ ಪ್ರೇಮದ
ಇಂಪಾದ ಹಾಡುಗಳು
ಎಲ್ಲಾ ಜಿಹ್ವವೂ ಹೇಳುವ
ಹಾಡಿಗೆ ಕತ್ತಲೂ ಹುಣ್ಣಿಮೆಯು
ಅಲ್ಪವೆ ಬರೆವ ಮದ್ಹಿನ ಸಾಲಿಗೆ
ಗೆಲ್ಲುವ ನೆಮ್ಮದಿಯೂ
ತಮದಲ್ಲಿ ದೀವಿಗೆ ಬೆಳಗಿಸಿ
ಕಾಯುವ ಮಕ್ಕಾದ ಮಡಿಲು
ಹೊಗಳಿ ಬರೆಯಲು
ಸೋತ ಕವಿಯ ಜನ್ಮವು ಹಡಿಲು
ಇಶ್ಕಿನ ಒರತೆಗಳೂ
(ಹನಿಯುಕ್ಕುವ)