Bhaanu Bhoomi (ಭಾನು ಭೂಮಿ)

ಈ ಹಾಡಿನ ದಾಟಿ ಬೇಕಾದಲ್ಲಿ ಈ ಲಿಂಕನ್ನು ಕ್ಲಿಕ್ ಮಾಡಿ

ಭಾನು ಭೂಮಿ ಸರ್ವ ಜೀವ ಸೃಷ್ಟಿಕರ್ತನೆ
ಬೇಡುವನಾ ಕೈಗಳೆತ್ತಿ ನಿತ್ಯ ನಾಥನೇ
ಕಡಲ ಜಲದ ಒಳಗೂ ನಿನ್ನ ಶಕ್ತಿ ತುಂಬಿದೆ
ವಿಶ್ವವೆಲ್ಲ ನಿನ್ನ ಆಜ್ಞೆಯಿಂದ ಚಲಿಸಿದೆ

ನಮ್ಮ ಆತ್ಮದ ಒಡೆಯಾನು ನೀ
ನಮ್ಮ ಜೀವದ ಅಧಿಕಾರಿ ನೀ
ನಮ್ಮ ಉಸಿರನ್ನು ಕಾಯುssವೆ ನೀ
ನಮಗೆ ಕಾಣದ ಅಧ್ಬೂssತ ನೀ ||ಭಾನು ಭೂಮಿ||

ಸೂರ್ಯ ಚಂದ್ರಾಗಳು ಜೊತೆಗೆ ತಾರೆಗಳು
ಸಾಗರ ಸರ್ವವೂ ನಿನ್ನ ಸೃಷ್ಟಿಗಳು
ಜಗದೊಡೆಯ ನೀನಲ್ಲವೇ
ಪರಮ ಕಾರುಣ್ಯನು ನೀನಲ್ಲವೇ
ಜೀವ ಕೊಟ್ಟವನು ನೀನಲ್ಲವೇ
ಅಂತ್ಯ ಮರಳುವಿಕೆಯು ನಿನಗಲ್ಲವೇ ||ಭಾನು ಭೂಮಿ||

ಭುವಿಯ ವ್ರಕ್ಷಗಳು ಬರೆವ ಅಸ್ತ್ರವಾದರೂ
ಕಡಲ ಜಲವೆಲ್ಲವೂ ಅದರ ಮಸಿಯಾದರೂ ||2|||
ಬರೆದೂ ಮುಗಿಯದ ಆ ಮಹಿಮೆ
ನಮ್ಮ ರಾಜದಿರಾಜನ ಮಹಿಮೆ
ಸರ್ವ ಬಲ್ಲವನೇ ಓ ರಾಹಿಮೆ
ಪಾಪ ಮನ್ನಿಸು ಓ ಅಲ್ಲಾಹನೇ ||ಭಾನು ಭೂಮಿ||

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy