Ba Baa Giniya (ಬಾ ಬಾ ಗಿಣಿಯೇ)

ಈ ಹಾಡಿನ ದಾಟಿ ಬೇಕಾದಲ್ಲಿ ಈ ಲಿಂಕನ್ನು ಕ್ಲಿಕ್ ಮಾಡಿ

ಬಾ ಬಾ ಗಿಣಿಯೇ ಬಣ್ಣದ ಗಿಣಿಯೇ
ಭಾನದಿ ಹಾಡುತ ಹಾರುವ ಗಿಣಿಯೇ
ರೌಳ ಶರೀಫಿನಾ ಮಕುಟವ ಸುತ್ತಿ
ಬರುವೆಯಾ ಓ ಗಿಣಿಯೇ
ನೀನು ಆ ಪುಣ್ಯ ಗೆಹದ ಮಹಿಮೆಯ ಹೇಳು
ಮುತ್ತಿನ ಅರಗಿಣಿಯೇ

ಮಮತೆಯ ತಾಣ ನವ ಉದ್ಯಾನ
ಮರುಭೂಮಿಯ ಆ ಪುಳಕಿತ ಭವನ
ಪುಣ್ಯ ಪುನೀತರು ತ್ವಾಹ ವಿಶ್ರಾಮ ಹೊಂದುವ ಗೇಹ
ಕಾಣಲು ತವಕದಿ ಕಾಯುತಲಿ ಹುದಿಮನದಲಿ ಒಂದೇ ಮೋಹ || ಬಾ ಬಾ ||

ಆಮಿನ ಹೆತ್ತರು ತಬ್ಬಲಿಯಾಗಿ
ಬೆಳೆದರು ಯಾಸಿನ್ ಕಣ್ಮಣಿಯಾಗಿ
ಅರುಹಿದನು ಆ ನಾಥನು ಸಂದೇಶವಾಹಕರಾಗಿ
ಸತ್ಯವ ನುಡಿಯುತ ಶಾಂತಿ ಮಂತ್ರವ ಸಾರಿ ಅಂತ್ಯ ಪ್ರವಾದಿ || ಬಾ ಬಾ ||

ಕುಲಗೋತ್ರದಲಿ ಅರಬರ ಪ್ರೀತಿ
ಮರೆತರು ನೀತಿ ಎಲ್ಲೋ ಅನೀತಿ
ರಾರಾಜಿಸಿತು ಮಕ್ಕದಲ್ಲೇ ಕಾನನ ಪ್ರೀತಿ
ಅಂದು ಸನ್ಮಾರ್ಗ ದೀಪವ ಹಚ್ಚಿಸಿ ಪಡೆದ ನೇಬಿಯಾರ ಪ್ರೀತಿ || ಬಾ ಬಾ ||

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy