ಆನಂದದ ಚಂದಿರ ಬಂದರು ಆ ದಿನ ಸಂತಸ ಸಂಭ್ರಮವಂದು,
ಶತಮಾನಗಳೆಷ್ಟದು ಉರುಳಿದರೂ
ಜನ ಮರೆಯದ ಮಧುವಿನ ಬಂಧು
ಜನ ಕೋಟಿಗಳಿಂದು ಮದ್ಹಲಿ ಮೆರೆಯುವ ಶುಭದಿನ ತಾಸಿದು ಬಂತು.(೨)
ಹಸ್ಸಾ ನರಹ ರಾಗದಲಿ
ಬೂಸೂರಿಯ ನವ ಕವನದಲಿ
ಮಧ್ಹಿನ ತಾಳವು ರಾರಾಜಿಸಲಿ
ಮೀಲಾದುನ್ನೆಬಿ ಝಿಂಧಾಬಾದ್ (೨)
ಸುನ್ನಿ ನಿಸರ್ಗಕೆ ಪರಿಮಳ ಚಲನೆಯು
ಮಿಲಾದುನ್ನೆಬಿ ಝಿಂಧಾಬಾದ್ (೨)
ಸುಮ ಶಾಂತಿಯ ಬಯಲಿನ ನಾದವ
ನೀಡುವ ಮದ್ಹಿನ ರಾಗವು ಕಾಣಿಸಲಿ
ಮನದಲ್ಲಿ ತುಂಬಿದ ಪೂರ್ಣತೆ ಶೋಭೆಯು
ತ್ವಾಹ ನನ್ನ ರಸೂಲೆ
ಮಕ್ಕಾದ ಅಜ್ಞತೆ ಕಾಲದ ಜ್ಞಾನವ
ನೀಡಿದ ಪುಣ್ಯ ಹಬೀಬೇ
(ಆನಂದದ ಚಂದಿರ ಬಂದರು )
ಸೌಹಾರ್ದತೆಯಲಿ ಬಾಳಿದರು
ಸಹನೆಯ ಗಿರಿಗಳ ದಾಟಿದರು
ಸೌಭಾಗ್ಯದ ಸುಮಧೀನೊಂದನ್ನು
ಜಗ ಶಾಂತಿಗೆ ನೆಬಿ ಸಾರಿದರು(2)
ಆತ್ಮೀಯ ಚೈತನ್ಯವ ಸವಿದುಂಬಿ
ಮೀಲಾದುನ್ನೆಬಿ ಝಿಂಧಾಬಾದ್ (2)
ಗೆಳೆಯಾ ನಿ ಕೇಳು ಮುಹಮ್ಮದ್ ನೆಬಿಯರ
ಸಂದೇಶದ ಸುಮ ಕುಸುಮವನು
ಸಹಬಾಳ್ವೆಯಿಂದಲೇ ಕೂಡಿದ ನಲ್ಮೆಯ
ಅಮರ ಸುವರ್ಗವ ತಂದೂ
ಆಹಾ ಇದೇನು ಪ್ರಪಂಚವು ನಗುವಲಿ
ಅರಳುತಿದೆ ಸುಮವಿಂದೂ
(ಆನಂದದ ಚಂದಿರ ಬಂದರು ಆ ದಿನ )
ಜನ ಕೋಟಿಗಳಿಂದು ಮದ್ಹಲಿ ಮೆರೆಯುವ ಶುಭದಿನ ತಾಸಿದು ಬಂತು.
ಆನಂದದ ಚಂದಿರ ಬಂದರು ಆ ದಿನ ಸಂತಸ ಸಂಭ್ರಮವಂದು,
ಶತಮಾನಗಳೆಷ್ಟದು ಉರುಳಿದರೂ
ಜನ ಮರೆಯದ ಮಧುವಿನ ಬಂಧು…