1.Special Announcement (ಅನೌನ್ಸ್ ಮೆಂಟ್)

ಅಸ್ಸಲಾಮು ಅಲೈಕುಂ,

“ಇಶಲ್ ವರಿಗಳ್”  ಯ್ಯಾಪ್  ಉಪಯೋಗಿಸುವ ನನ್ನ ಸಹೃದಯಿ ಸ್ನೇಹಿತರು, ಮದರಸ ಮಕ್ಕಳು ಹಾಗೂ ಗುರುಗಳಿಗೆ ತುಂಬು ಹೃದಯದ ಹೃತ್ಪೂರ್ವಕ ವಂದನೆಗಳು. ಇನ್ನೇನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇದೆ ನಾವು ಕಾತುರದಿಂದ ಕಾಯುತ್ತಿರುವ  “ರಬೀವುಲ್ ಅವ್ವಲ್” ನಮ್ಮ ಮುಂದಿರಲು.

ಪ್ರತಿ ವರ್ಷದಂತೆ ಈ ವರ್ಷವೂ ಹಬೀಬರ (ಸ.ಅ) ಮೀಲಾದ್ ಆಚರಣೆ ಸಡಗರ ಸಂಭ್ರಮದಿಂದ ಕೊಂಡಾಡಲು ನಾವೆಲ್ಲರೂ ಸಜ್ಜಾಗಿದ್ದೇವೆ.  ಪುಟಾಣಿ ಮಕ್ಕಳಿಂದ ಹಿಡಿದು ಯಾವುದೇ ವಯೋ ಮಿತಿ ಇಲ್ಲದೆ, ಸುಂದರ  ಸುಮಧುರ ಮಧ್ ಹ್  ಹಾಡುಗಳು, ಭಾಷಣಗಳನ್ನು ಮಾಡುತ್ತಾ ನಮ್ಮ ಪ್ರವಾದಿ ಪ್ರೇಮವನ್ನು ನಾವು ಪ್ರದರ್ಶಿಸಿದ್ದೇವೆ.

ರಸಭರಿತ ಹಾಗೂ ಮನಸೆಳೆಯುವಂತಹ ಸಾಹಿತ್ಯವುಳ್ಳ, ವ್ಯತ್ಯಸ್ಥ ಭಾಷೆಗಳಲ್ಲಿ, ವೈವಿಧ್ಯಮಯ ದಾಟಿಗಳಲ್ಲಿ ಇರುವಂತಹ ಸಾಹಿತ್ಯಗಳನ್ನು (ಲಿರಿಕ್ಸ್) ನಾವು ಕ್ರೋಢಿಕರಿಸುತ್ತಿದ್ದೇವೆ.

ಈ ಮೂಲಕ ತಿಳಿಸಬಯಸುವುದೇನೆಂದರೆ, ಇಶಲ್ ವರಿಗಳ್ ಯ್ಯಾಪ್ ನಲ್ಲಿ ನಾವು ಪ್ರಕಟಿಸುವ ಹಾಡು(ಲಿರಿಕ್ಸ್)  ನಾವು ಆಯ್ದದ್ದು. ಆದರೆ, ಇದು ನಿಮಗೆ ಎಷ್ಟರ ಮಟ್ಟಿಗೆ  ಉಪಯೋಗವಿದೆಯೆಂದು ನಮಗೆ ತಿಳಿದಿಲ್ಲ. ಹಾಗಾಗಿ, ಮಿಲಾದ್ ಷರೀಫ್ ಗೆ ಬೇಕಾಗಿ ನಿಮಗೆ ಬೇಕಾದ ಹಾಡುಗಳನ್ನು ಯ್ಯಾಪ್ ನಲ್ಲಿ ಪ್ರಕಟಿಸಲು ನೀವು ನಮ್ಮನ್ನು ಸಂಪರ್ಕಿಸಬಹುದು.

ನೀವು ಮಾಡಬೇಕಾದದ್ದು ಇಷ್ಟೇ –
ಮದರಸ ಮಕ್ಕಳು – ನಿಮಗೆ ಮದರಸದಲ್ಲಿ ಲಭಿಸಿದ ಹಾಡಿನ ಪ್ರತಿ ನಮಗೆ ವ್ಹಾಟ್ಸಪ್ಪ್ ಮಾಡತಕ್ಕದ್ದು.
ಗುರುಗಳು / ಹಜ಼್ರತ್ – ಮಕ್ಕಳಿಗೆ ಕೊಡಲು ಇಚ್ಛಿಸುವ ಹಾಡು ( ಆಡಿಯೋ / ವೀಡಿಯೊ) ಪ್ರತಿಯನ್ನು ವ್ಹಾಟ್ಸಪ್ಪ್ ಮಾಡತಕ್ಕದ್ದು.
ಗಾಯಕರು – ನಿಮ್ಮ ನೆಚ್ಚಿನ ಹಾಡುಗಳನ್ನು (ಆಡಿಯೋ / ವೀಡಿಯೊ) ಪ್ರತಿ / ಲಿಂಕ್ ವ್ಹಾಟ್ಸಪ್ಪ್ ಮಾಡತಕ್ಕದ್ದು..

ವ್ಹಾಟ್ಸಪ್ಪ್  – +918762822742

ಹೊಚ್ಚ ಹೊಸ ಹಾಡುಗಳನ್ನು “ಇಶಲ್ ಟ್ಯೂನ್ಸ್” ಎಂಬ ಆಂಡ್ರಾಯ್ಡ್ ಯ್ಯಾಪ್ ನಲ್ಲಿ ಪ್ರಕಟಿಸಲಾಗುವುದು. ಇಂದೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿ ನಿರಂತರ ಮಧ್ಹ್ ಹಾಡನ್ನು ಆಸ್ವಾದಿಸಿರಿ.

Download IshalTunes from Google Play Store! Or Visit Online 

ಇಶಲ್ ವರಿಗಳ್ ಯ್ಯಾಪ್ ಇನ್ನಷ್ಟು ಉತ್ತಮವಾಗಿಸಲು ನಿಮ್ಮ ಸಲಹೆ ಸಹಕಾರ ಅತ್ಯಗತ್ಯ. ಹಾಗಾಗಿ,
ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಲು ಮರೆಯದಿರಿ…

ಇನ್ ಶಾ ಅಲ್ಲಾಹ್ ಆದಷ್ಟು ಬೇಗ “ಇಶಲ್ ವರಿಗಳ್ ಮಲಯಾಳಂ ಲಿರಿಕ್ಸ್ ಯ್ಯಾಪ್” ರಿಲೀಸ್ ಮಾಡಲಿದ್ದೇವೆ. ಸಹಕರಿಸಿ ಹಾಗೂ ಇಶಲ್ ವರಿಗಳ್ ಯ್ಯಾಪ್ ಗಾಗಿ  ದುಡಿಯುವ ಕಾರ್ಯಕರ್ತರನ್ನು ನಿಮ್ಮ ದುಆದಲ್ಲಿ ನೆನಪಿಸಿ..

ಇತೀ ನಿಮ್ಮ ಸಹೃದಯಿ
ಟೀಮ್ ಇಶಲ್ ವರಿಗಳ್ 

Author: Admin

Leave a Reply

Your email address will not be published.