ವಿನೀತನಾಗಿ ಬೇಡುವೆ ನಾದಾ ಪುನೀತ ಗೊಳಿಸು ಓ ಅಲ್ಲಾಹ್
ನಿಶ್ಚಿತವಾಗಿಯೂ ನಿನ್ನನು ಹೊರತು ಆರಾದ್ಯನರ್ಹ ಯಾರಿಲ್ಲ
ನಿಶ್ಚಿತವಾಗಿಯೂ ನಿನ್ನನು ಹೊರತು ಆರಾದ್ಯನರ್ಹ ಯಾರಿಲ್ಲ
ಶತನಾಮಗಳ ಒಡೆಯನು ನೀನು ನಿನ್ನಯ ಸೃಷ್ಟಿಯ ಕಾಪಾಡು
ನೀನೇ ನಿತ್ಯ ನೀನೇ ಸತ್ಯ ದಾಸನ ಕೂಗನು ನೀ ಕೇಳು
ಪಾಪಗಳೊಂದಿಗೆ ನಿನ್ನಯ ಬಳಿಗೆ ಮರಳುವ ವೇಳೆ ಕಾಪಾಡು ||2||
ಪ್ರತಿಫಲ ದಿನದ ಒಡೆಯನು ನೀನು ಪ್ರಪಂಜ ಸಲಹುವೆ ಓ ಅಲ್ಲಾಹ್
ವಿನಮ್ರವಾಗಿ ಶಿರವನು ಬಾಗುವೆ ವಿಧೇಯನಾಗಿ ಓ ಜಲ್ಲಾ
ಮಹಾ ವಿಪತ್ತು ತಲುಪುವ ಹೊತ್ತು ಮಹಾ ಪ್ರಭುವೇ ಕಾಪಾಡು
ಮಣ್ಣು ಈ ಮಣ್ಣಿಗೆ ಸೇರುವ ಮುನ್ನ ಮನುಷ್ಯನಾಗಿಸು ಓ ಅಲ್ಲಾಹ್