ಸ್ವಲಾತುಲ್ಲಾ ಸಲಾಮುಲ್ಲಾ
ಅಲಾ ತ್ವಾಹ ರಸೂಲಿಲ್ಲಾಹ್
ಸ್ವಲಾತುಲ್ಲಾ ಸಲಾಮುಲ್ಲಾ
ಅಲಾ ಯಾಸೀನ್ ಹಬೀಬಿಲ್ಲಾಹ್ (2)
ಬರಿಗೈಲಿ ಹೊರಟವನು
ಮನ ನೊಂದು ಅಳುವವನು ||2||
ಪರಲೋಕ ದಿನಾದಂದು
ಶಿಫಾರಸ್ಸನು ವರ್ಷಿಸಿರಿ
(ಸ್ವಲಾತುಲ್ಲಾ)
ಇರುಳೆಂಬ ಅಜ್ಞಾನವನು
ಪ್ರಭೆಯೆಂಬ ಅರಿವನಿಲಿ
ಜಗತ್ತುಂಬ ಹರಡಿದರು
ಇಸ್ಲಾಮನ್ನು ಬೆಳಗಿ ದರು
(ಸ್ವಲಾತುಲ್ಲಾ)
ಗಮ್ಯ ಹಸಿರ ಪಾರಿಜಾತ
ತ್ವಾಹ ನೂರುಲ್ಲಾಹ್
ರಮ್ಯ ಮನಸ ಸ್ನೇಹದಾತ
ತ್ವಾಹ ಸ್ವಲ್ಲಲ್ಲಾಹ್ ||2||
ಅಲೈಕ ಸ್ವಲಾತುಲ್ಲಾಹ್
( ಸ್ವಲಾತುಲ್ಲಾ)
ಭೋರ್ಗರೆವ ಅಲೆಯಲ್ಲೂ
ಬೆದರಿಸುವ ಗಾಳಿಯಲೂ
ಕಂಪಿಸುವ ಭೂಮಿಯಲೂ
ಅಭಯವು ಯಾ ರಸೂಲುಲ್ಲಾಹ್
(ಸ್ವಲಾತುಲ್ಲಾ)
ಖಾಲಿ ಜೋಳಿಗೆಯಲ್ಲಿ ನಾ ಬಂದವನು
ಪಾಪ ತುಂಬಿದ ಕೊಡವನ್ನೇ ತಂದವನು ||2|
ಪುಣ್ಯ ಮಣ್ಣಲ್ಲಿ ನಿಂತವನ ಮನವು ಸದಾ
ಖಾಲಿ ಜೋಳಿಗೆಯಲ್ಲಿ ನಾ ಬಂದವನು
ಪಾಪ ತುಂಬಿದ ಕೊಡವನ್ನೇ ತಂದವನು
ಇಶ್ಕ್ ಹನಿಯುವ ಹಾದಿಯ ಪ್ರಣಯ ಕಥೆ
ಇದು ಅಗಲುವ ಮಣ್ಣಿನ ಆರ್ದ್ರ ವ್ಯಥೆ
ಇಶ್ಕ್ ಹನಿಯುವ ಹಾದಿಯ ಪ್ರಣಯ ಕಥೆ
ಇದು ಅಗಲುವ ಮಣ್ಣಿನ ಆರ್ದ್ರ ವ್ಯಥೆ
ಪಾಪಿ ಹಾಡುವ ಚರಣದ ನವಿರೇ ತಥಾ
ಪಾಪಿ ಹಾಡುವ ಚರಣದ ನವಿರೇ ತಥಾ
ಖಾಲಿ ಜೋಳಿಗೆಯಲ್ಲಿ ನಾ ಬಂದವನು
ಪಾಪ ತುಂಬಿದ ಕೊಡವನ್ನೇ ತಂದವನು
ಹಿಜಿರಾ ಹೊರಟವರ ಹೃದಯದಿ ಬಿಸಿಯುಸಿರು
ದಾರಿ ಕಾಯುವ ಊರಲ್ಲಿ ಮನ ಹಸಿರು
ಹಿಜಿರಾ ಹೊರಟವರ ಹೃದಯದಿ ಬಿಸಿಯುಸಿರು
ದಾರಿ ಕಾಯುವ ಊರಲ್ಲಿ ಮನ ಹಸಿರು
ದಫ್ಫಿನ ತಾಳವು ತ್ವಲ ಅಲ್ ಬದುರು ಹಾಡಿ
ಜಗವೇ ಸ್ವಾಗತಿಸುವಂತೆ ತ್ವೈಬ ಮುಟ್ಟಿ
ಜನ್ನತಿನ ಹಾದೀಲಿ ಹರಸು ಖುದಾ
ಖಾಲಿ ಜೋಳಿಗೆಯಲ್ಲಿ ನಾ ಬಂದವನು
ಪಾಪ ತುಂಬಿದ ಕೊಡವನ್ನೇ ತಂದವನು
ಆಗಮನದ ಖುಷಿಯನ್ನು ಜಗವೇ ಹಾಡುವುದು
ಆಹ್ಲಾದದ ಕವಿತೆಗಳು ಅಕ್ಷರ ಜೀಕುವುದು
ಆಗಮನದ ಖುಷಿಯನ್ನು ಜಗವೇ ಹಾಡುವುದು
ಆಹ್ಲಾದದ ಕವಿತೆಗಳು ಅಕ್ಷರ ಜೀಕುವುದು
ಬಂದಾದ ಖುಷಿಯಲ್ಲಿ
ಆಘೋಷವೂ
“ಮರ್ಹಬಾ ಮರ್ಹಬಾ”
“ಮರ್ಹಬಾ ಮರ್ಹಬಾ”
ಖಾಲಿ ಜೋಳಿಗೆಯಲ್ಲಿ ನಾ ಬಂದವನು
ಪಾಪ ತುಂಬಿದ ಕೊಡವನ್ನೇ ತಂದವನು
ಆ ಮನದೂರು
ನೆನೆದರೆ ಮನದಲಿ ಹೊನ್ನೂರು
ಎಂದೂ ಆ ಎದೆಯೂರು
ಮಣ್ಣಲಿ ಸ್ನೇಹದ ಮುತ್ತೂರು
ಆ ಮನದೂರು
ನೆನೆದರೆ ಮನದಲಿ ಹೊನ್ನೂರು
ಎಂದೂ ಆ ಎದೆಯೂರು
ಮಣ್ಣಲಿ ಸ್ನೇಹದ ಮುತ್ತೂರು
ಮದೀನಾ
ಮದೀನಾ
ಮಣ್ಣಲ್ಲಿ ಸ್ವರ್ಗದ ಎದೆಯೂರು
ಆ ಮನದೂರು
ನೆನೆದರೆ ಮನದಲಿ ಹೊನ್ನೂರು
ಎಂದೂ ಆ ಎದೆಯೂರು
ಮಣ್ಣಲಿ ಸ್ನೇಹದ ಮುತ್ತೂರು
“ಮರ್ಹಬಾ ಮರ್ಹಬಾ” ಯಾ ರಸೂಲ್
“ಮರ್ಹಬಾ ಮರ್ಹಬಾ” ಯಾ ರಸೂಲ್