ಪರಿಶುದ್ದ ಗೇಹ ನಿನ್ನ ಕ-ಅಬವ ಕಾಣಲು
ಆಸೆಯೂ ಏರಿದೆ ಅಲ್ಲಾಹನೇ
ಚಿಮ್ಮುವ ಹೊಂಬೆಳಕ ಚೆಲ್ಲುವ ಕ-ಅಬವ
ಕಾಣಲು ಕರುಣಿಸು ಅಲ್ಲಾಹನೇ
ಆಸೆಯೂ ಏರಿದೆ ಅಲ್ಲಾಹನೇ
ಚಿಮ್ಮುವ ಹೊಂಬೆಳಕ ಚೆಲ್ಲುವ ಕ-ಅಬವ
ಕಾಣಲು ಕರುಣಿಸು ಅಲ್ಲಾಹನೇ
ವಿಶಾಲವಿ ವಿಶ್ವ ವೆಂಬ ಹಾಸಿಗೆಯಲ್ಲಿ
ವಸಿಸುವ ಬಹು ಕೋಟಿ ಮುಸಲ್ಮಾನರು
ಪ್ರಾರ್ಥನೆಗಾಗಿ ತಿರುಗುವ ಗೇಹವದು
ಕಾಣುವ ಕಾತುರ ತೀರಿಸು ನೀ
ಅಹಂಕಾರ ಭಾವದಿಂದ ಕೆಡಹಲು ಅನುವಾಗಿ
ಅಬ್ರಃಹತ್ತಿನ ಸೈನ್ಯ ಬಂತು ಸಾ…ಲಾ..ಗಿ…
ಅಬಬೀಲ್ ಹಕ್ಕಿಗಳ ಮೂಲಕ ಚದುರಿಸಿದೆ
ಕ-ಅಬವ ರಕ್ಷಿಸಿದೆ ಅಲ್ಲಾಹನೇ..
ಕರಿಬಿಳಿ ಎಂಬ ಭೇದ ಭಾವವ ತೊರೆದು
ಸೇರುವ ಜನತೆಗೆ ಗುರಿಯು ಒಂದೇ
ನಿನ್ನಯ ತೃಪ್ತಿಗಾಗಿ ಸರ್ವವ ಅರ್ಪಿಸುತ
ಹಜ್ಜಿನ ತಿನ್ಗಳಲ್ಲಿ ಸೇರುವರು
ಒಡೆಯ ನಿನ್ನಲ್ಲಿ ಬೇಡುವೆ ನಾನಿಂದು
ಅನುಗ್ರಹಿಸೆಮಗೆ ನಿನ್ನ ಗೇಹ ಕಾಣಲು
ಕನಸಿನ ಲೋಕದಲ್ಲಿ ನಾ ಕನ್ಡ ಕನಸುಗಳ
ನಯನದಿ ಕಾಣಾಲೆನಗೆ ಕರುಣೀಸುನಿ…