ನಾ ಬರೆಯೋ ಕವಿತೆಯಲಡಗಿರೊ
ಪ್ರಣಯವು ನಬಿಯವರಾ ಮೇಲೆ.
ನಾ ಹಾಡೊ ಹಾಡಿನ ರಾಗದಿ
“ನುಡಿಸುವೆ ಪ್ರಣಯದ ಆ ಲೀಲೆ“..2
(ನಾ ಬರೆಯೋ)
ಆ ತೋರುವ ಪ್ರಣಯದಿˌˌˌ
ಬರೆಯುವ ಕವನದಿ
“ಸಾಲುಗಳೂ ನಬಿಯೂˌˌಕಾಣಲೂ ಹಂಬಲವೂ” ..2
ಎತ್ತಿದ ಕೈಯು ನಬಿಯೇˌˌˌ
ಶೂನ್ಯವೇ ಎಂಬ ಭಯವೇ..
ಅಳಿಯದ ಪ್ರೇಮ ನಿಧೀಯೆ..
ಆಶಿಕೀಗಳ ಮನವೇ..
ಯಾ ರಸೂಲಲ್ಲಾಹ್…..
(ನಾ ಬರೆಯೋˌˌˌˌˌˌˌˌˌನಾ ಬರೂಯೋ)
ಆ ಪುಣ್ಯ ಪಾದ ಸ್ಪರ್ಶದ
ಮಣ್ಣಿನ ಕಣವು ನಾನಲ್ಲ.
ಆ ಮುತ್ತಿನ ಪಾದಕೆ ರಕ್ಷೆಯು
ಆಗುವ ಭಾಗ್ಯವು ನನಗಿಲ್ಲ……… 2
ಆ ಸನಿಹದಿ ಸೇವಕನಾಗೊ
ಪುಣ್ಯವು ನನಗೆ ನೀಡಿಲ್ಲಾ. …….. 2
ಈ ಪಾಪಿಯ ಮನದಿಂದ
ಆಸೆಯು ಎಂದಿಗೂ ಅಳಿಯೋಲ್ಲ..
ಅವರೂ ಇವರೂ ಹಲವರು ಕಂಡ
ಮದೀನವ ನಾ ಕಂಡಿಲ್ಲಾ…
ಭಾಗ್ಯವು ನನಗ್ಯಾಕಿಲ್ಲಾ….
(ನಾ ಬರೆಯೋ)
ಬರೆದೆಷ್ಟು ಕವನದ ಸಾಲು
ನಿಮ್ಮಯ ಪಾಲಿಗೆ ಅರ್ಪಿಸುವೆ.
ಬೆರೆಳೆಡೆಯಲಿ ಚೆಲ್ಲಿದ ಪದಗಳ
ಜೋಡನೆಯಲ್ಲೂ ವರ್ಣಿಸುವೆ……… 2
ಈ ಜೀವ ಮಣ್ಣಿನ ರುಚಿಯು
“ಸವಿಯುವ ಮುನ್ನಾ ಓ ನಬಿಯೇ…….. 2
ಈ ನಯನದಿ ಹರಿಯುವ ಹನಿಗೆ
ಉತ್ತರ ನೀಡಿ ಕಣ್ಮನಿಯೇ..
ಅವರೂ ಇವರೂ ಹಲವರು ಕಂಡ
ಮದೀನವ ನಾ ಕಂಡಿಲ್ಲಾ…
ಭಾಗ್ಯವು ನನಗ್ಯಾಕಿಲ್ಲಾ…
(ನಾ ಬರೆಯೋ)