ಪದವೇ ಸಾಲದ ರಾಜ ಕಥೆಯೂ
ಕವಿತೆ ಕೇಳಿ ಕರೆಯುವಿರಾ ಎಂಬ ಮೋಹವು.
ಅರ್ಹನಲ್ಲ ವರ್ಣಿಸಲು ನ
ಪ್ರಣಯದಿ ನನ್ನ ಕೊರೆತೆ ಎನ್ನ
ಸಾಲದೇನೊ ಸಾಲುಗಳಲಿ ಇಶ್ಕಿನಾ ಹಣಿಯೂ..
ಹಲವಾರು ಸನಿಹದೆದುರು
ಪ್ರಣಯ ಮತ್ತಲೆ ಮಡಿದಾರು
ಹೃದಯ ಕದವ ತೆರೆದು ನಾನು ಕಾದು ಕುಳಿತರೂ
ಕರಗದಂತೆ ಕಾಯುವೆನಾ..
ಕೊರಗೊ ಹೃದಯದಿ ಬೇಡುವೆನಾ..
ಮದೀನಾದ ಮಣ್ಣಲಿ ಮಲಗೂವಾ ಆಸೇಯಾ..
ನನ್ನ ಹೃದಯದಿ ನಶೆಯ ತುಂಬಿದ ತ್ವಾಹ ರಸೂಲವರೇ..
ಜೀವವು ಪ್ರಣಯದ ಮತ್ತಲ್ಲೆ ಅಡಗಿದೆ ಕಾಣಲು ಕಾತುರವೇ..
(ಮನದ)
ಕಾಲವೆಷ್ಟು ಕಾದೆ ನಾನು
ಕಾಣಲಾ ಮರು ಭೂಮಿಯನ್ನು
ಕಂಡ ಅದವನ ಭಾಗ್ಯವೂ ನನಗಿಲ್ಲ ವೆ ಏನು..
ಕನಸು ಕಾಣದ ಕಣ್ಗಳೇತಕೆ
ಮಾತು ಕೇಳದ ಕಿವಿಯು ಬೇಕೆ
ಕುರುಡ ಕಂಡ ಕನಸು ಕೂಡ ನನಗೆ ಇಲ್ಲವೇ.
ಆತ್ಮ ಹೊರಡೊ ಗಳಿಗೆವರೆಗು ಆಲಿಸುವೆ ನಾ ನಿಮ್ಮ ಕರೆಯಾ..2
ಕರುಣೆಯ ಕಡಲಾದ ನಬಿ ಕರೆಯೋಲೆ ಕಳಿಸುವಿರಾ
ಇವನ ಹೃದಯ ತುಂಬುವಿರಾ..ಕನಸಿಗೆ ಕಾವಲಾಗುವಿರಾ..
(ಮನದ)
ಬಾಲ್ಯದಿಂದಲೆ ಹೃದಯ ಕೇಳಿತು
ತೊದಲು ಮಾತಲು ನಿಮ್ಮ ಕುರಿತು
ಸಾವಿರ ನಾಲಗೆಯು ಹರಸಿ ಹೇಳುವ ಮುತ್ತೂ..
ಕರುಣೆ ಬತ್ತದ ಕಡಲ ಅಲೆಯೂ
ಪ್ರಣಯದಿ ಸಾಗರಕು ಮಿಗಿಲು
ಮಹ್ಶರ ಅಂಗಳದಿ ಅಭಯ ನೀಡುವಾ ಮಡಿಲೂ..
ಕೆತ್ತಿಸುವೆ ನಾ ಹೃದಯದಲ್ಲು
ನಿಮ್ಮ ಹೆಸರಿನ ಶಿಲ್ಪಿ ಕಲ್ಲು
ಕಣ್ಣ ಹನಿಯಲು ಕವಿತೆ ರಚಿಸಿ
ಕಾಯುವೆ ನಾ ದಿನವ ಎಣಿಸಿ
ಹೃದಯದ ಆಸೆಗಳನು ಕವಿತೇಗೆ ಜೋಡಿಸುವೆ
ದಿನವೂ ನಿಮ್ಮ ಜಪಿಸೂವೆ…ಕಾದು ಕಾದು ದನಿದಿರುವೆ….
(ಮನದ)