Madhannu Geechi Haduve (ಮದ್ಹನ್ನು ಗೀಚಿ ಹಾಡುವೇ)

ಮದ್ಹನ್ನು ಗೀಚಿ ಹಾಡುವೇ…
ನನ್ನ ನೆಬೀಯರೇ..
ಕನಸಲ್ಲು ತಮ್ಮನು ಬೇಡುವೇ..
ನಿಧಿಯೆ ತಾಜರೆ….(2)

ಆ ಮದೀನಾ ಕಂಡ ಕಣ್ಗಳ ಕಂಡು ಕೊರಗಿದೆ ಜೀವನಾ…
ಒಮ್ಮೆ ಕರೆಯಿರಿ ನನ್ನ ನೆಬಿಯೇ..
ಜೀವನಾ..ಅದು ಪಾವನಾ…(2)

ಮದ್ಹನ್ನು ಗೀಚಿ ಹಾಡುವೇ…
ನನ್ನ ನೆಬೀಯರೇ..
ಕನಸಲ್ಲು ತಮ್ಮನು ಬೇಡುವೇ..
ನಿಧಿಯೆ ತಾಜರೆ….

ನಿತ್ಯ ಸ್ನೇಹದಿ ಜೀವ ನುಡಿವಾ..
ಆ ಸ್ವಲಾತನು ಕೇಳಿರಿ..
ಮರಣ ಸಮಯದಿ ನೋವ ಮರೆಸಲು
ಮಂದಹಾಸದಿ ಕಾಣಿರಿ….(2)

“ಇಲ್ಲಾ ಈ ಪಾಪಿಗೆ ತಮ್ಮ ಹೊರತು
ಬೇರೆ ಅಭಯಾ..ಸಯ್ಯಿದೀ…..”(2)

ಮದ್ಹನ್ನು ಗೀಚಿ ಹಾಡುವೇ…
ನನ್ನ ನೆಬೀಯರೇ..
ಕನಸಲ್ಲು ತಮ್ಮನು ಬೇಡುವೇ..
ನಿಧಿಯೆ ತಾಜರೆ….

ಕಬರಿನಾ ಇರುಳಲ್ಲಿ ನೋವಲಿ
ನೆಬಿಯೆ ತಮ್ಮನು ಕೂಗುವೇ..
ಮಹ್ಶರಾ..ಮಣ್ಣಲ್ಲಿ ತಮ್ಮ
ಸನಿಹವನ್ನೇ..ಬೇಡುವೇ….(2)

“ಇಲ್ಲಾ ಈ ಪಾಪಿಗೆ ತಮ್ಮ ಹೊರತು
ಬೇರೆ ಅಭಯಾ..ಸಯ್ಯಿದೀ…..”(2)

ಮದ್ಹನ್ನು ಗೀಚಿ ಹಾಡುವೇ…
ನನ್ನ ನೆಬೀಯರೇ..
ಕನಸಲ್ಲು ತಮ್ಮನು ಬೇಡುವೇ..
ನಿಧಿಯೆ ತಾಜರೆ….

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy