ಇಷ್ಕಿನ ಹನಿ ಸಾಲುಗಳ ಮುಂದು
ಸ್ನೇಹವ ನುಡಿಯುವೆನು ನಾನೆಂದು……..||2||
ಜಗದಗಲ ಸೃಷ್ಟಿಯ ಕಾರಣವು ತಾವು
ತಮ್ಮ ಅನುಚರರಿಗು ಅನುಕರಿಣೆ ನೀವು||2||
ಸ್ನೇಹವ ನುಡಿಯುವೆನು ನಾನೆಂದು……..||2||
ಜಗದಗಲ ಸೃಷ್ಟಿಯ ಕಾರಣವು ತಾವು
ತಮ್ಮ ಅನುಚರರಿಗು ಅನುಕರಿಣೆ ನೀವು||2||
ಮಾದರಿ ಜೀವನ ,ಇರುಜಗಕ್ಕಾಶ್ರಯ
ಮಣ್ಣಾಗುವ ಮುನ್ನಾ,ಅನುದಿನದ ತವಕ||2||
ಈ ಜೀವ ಪೂರ್ತಿ ತಮ್ಮ ಗೆರೆ ಗೀಚುವೆ
ಅಭಿಲಾಷೆಯು,ಅನುರಾಗ ಪ್ರೇಮಾ ಕಥೆ
ಅಸ್ಸಲಾಂ…ವಸ್ಸಲಾಂ…ಯಾ ಹಬೀಬೆ ಖುದಾ
ಆಶಿಕನು ಹಾಡುವೆನು,ಖಾತಿಮುಲ್ ಅಂಬಿಯ …….||2||
ಮುಗಿಯದ ಪ್ರೇಮವು ಅನುರಾಗ ಆನಂದವು
ಮುಗಿಯದಾ ವ್ಯಥೆಯಲ್ಲಿ ಕಲ್ಮಶಾ ಮನವು||2||
ಸ್ವಹಾಬರು ಹಾಡಿದ ಸ್ನೇಹ ಗೀತೆಯಲ್ಲಿ
ಈ ಪಾಪಿಗೆ ಸರಿಯಾಗೋ ಸಾಲಿಲ್ಲ
ಕಾತುರದಿ, ಕಾಯುವೆನು,ಕರಗಳೆತ್ತಿ ಬೇಡುವೆನು
ಒಮ್ಮೆ ಆ ಮದೀನಾ ಮಣ್ಣು ತಲುಪಲು||2||