ಹೆತ್ತ ಮಣ್ಣನ್ನೂ ತೊರೆಯುವ ವೇಳೆ
ಒಡೆದ ಹೃದಯದೀ ವಿರಹದ ಕಾವು
ತ್ಯಜಿಸಿ ಸಾಗುವ ಬೇಗೆಯ ದಾಟೀ
ಪ್ರಿಯ ಹಬೀಬರು ಅಗಲುವ ನೋವು (2)
ಮಕ್ಕಾ ನನ್ನ ಮಕ್ಕಾ, ಮಕ್ಕಾ ಪುಣ್ಯ ಮಕ್ಕಾ (2)
(ಹೆತ್ತ ಮಣ್ಣನ್ನೂ)
ಬಾಲ್ಯದ ಬದುಕನ್ನು ಪಿತೃ ವಿಯೋಗದಲೀ
ಕಳೆದವರು ಮಿಡಿದದ್ದು ಅಂದು ಪ್ರೀಯ ಉಮ್ಮತ್ತಿಗೇ
ಮನದಲಿ ಮೂಡಿರುವಾ ಗುರುತುಗಳನ್ನೆಲ್ಲಾ
ಮಾಸಲು ಬರುವ ದೂರ ನಾಡು ಮದೀನ ವಾಗಲೀ…(2)
ಎಟ್ಟು ನಾರುವ ಭಾರ ಕರುಳನು ಎತ್ತಲಾರದೇ ನೊಂದು ಬೆವೆತರೂ
ಹೆತ್ತ ಭೂಮಿ ಮಕ್ಕಾದೊಂದಿಗೆ ಪ್ರೀತಿ ತೊರೆಯಲಿಲ್ಲಾ…
(ಹೆತ್ತ ಮಣ್ಣನ್ನೂ)
ಎಲ್ಲಾ ಮಾಸಿದರೂ ,ಏನೂ ಸಹಿಸಿದರೂ
ಅಗಲಿದ ಮಣ್ಣಿನ ಪ್ರೇಮವಿರಾಗ ತಮ್ಮ ವಿಳಾಸಾ
ಕಾಣದ ದೂರದಲೀ ನೋಡದ ಊರಿನಲೀ
ಕಾಯುತ್ತಿರುವ ಸ್ನೇಹ ನಾಡು ಮದೀನವಾಗಲೀ.(2)
ಹೆಜ್ಜೆ ಕಲಿತ ಜನ್ಮ ನಾಡಿಗೆ ತಿರುಗದ ಪಾದದ ಹೆಜ್ಜೆ ಬಳಸಿ
ಹೊರಟೂ ನಿಂತ ಹಬೀಬಿರನ್ನು ನೆನೆದು ನಿಂತ ಮರಳ ನಾಡೇ ದುಃಖ ಸಾಗರಾ..
ಹೆತ್ತ ಮಣ್ಣನ್ನೂ ತೊರೆಯುವ ವೇಳೆ
ಹೊಡೆದ ಹೃದಯದೀ ವಿರಹದ ಕಾವು
ತ್ಯಜಿಸಿ ಸಾಗುವ ಬೇಗೆಯ ದಾಟೀ
ಪ್ರೀಯ ಹಬೀಬರು ಅಗಲುವ ನೋವು.
ಮಕ್ಕಾ ನನ್ನ ಮಕ್ಕಾ, ಮಕ್ಕಾ ಪುಣ್ಯ ಮಕ್ಕಾ
ಮಕ್ಕಾ ನನ್ನ ಮಕ್ಕಾ, ಮಕ್ಕಾ ಪುಣ್ಯ ಮಕ್ಕಾ..
( ಹೆತ್ತ ಮಣ್ಣನ್ನೂ)