ಹರಸುವೆ ಅಮ್ಮಾ…
ನಿನ್ನ ಸುತರ ಕಾಯುವೇ
ತಾಯೆ ಜನ್ಮ ದಾತೆಯೇ..2
ನಿನ್ನ ಸುತರ ಕಾಯುವೇ
ತಾಯೆ ಜನ್ಮ ದಾತೆಯೇ..2
ಮಡಿಲಲ್ಲಿ ಶಿರವಿಟ್ಟು ನಾನು ಮಲಗಿದೆ
ಕ್ಷಣದಲ್ಲೆ ಗಲ್ಲವ ಸವರಿದೇ…
ತನ್ನೊಳಗೆ ಗೆಲುವಿನ ನಗುವು ಬೀರಿದೆ
ಬೆನ್ನಿಂದೆ ತಾಯಿಯ ಬಲವಿದೇ…
(ಹರಸುವೆ)
ಕಂದನ ಕಣ್ಣಿಗೆ ನೋವ ಮರೆಚಿ
ಕಟ್ಟುವಳು ತಾಯಿ ಹಲವೇಶ
ನಗುವಲ್ಲೆ ನಲಿಯುತ ನೋವ ಸಹಿಸಿ
ನರುಳುವಳು ಹೇಗೊ ನವ ಮಾಸ…
ತನ್ನೊಳಗೆ ತನುಗೊಳಿಸಿ
ಎದೆಯಿಂದ ಹಾಲಿಳಿಸಿ
ಕೈಯಲ್ಲು ತುತ್ತಿಡುವ ಮಮತೇಯ ಮಡಿಲು
(ಹರಸುವೆ)
ಮಮತೆಯ ಮೂರ್ತಿಯು
ಸಮತೇಯ ಸ್ಪೂರ್ತಿಯು
ಪದಗಳಿಗೆ ಸಿಗದ ಕೀರ್ತಿಯೂ…2
ಆಲೋಚನ ಮಿತಿಗು ಸಿಕ್ಕದಿವಳು
ಕಲ್ಪನ ಲೋಕಕ್ಕೆ ಎಟುಕದವಳು
ತೆವಳಿ ಬರಲು ಕೈಯ್ಯ ನೀಡಿದವಳು
ತೊದಲು ನುಡಿಯಲೂ ತಿದ್ದೀದಳೂ..
ಹರಸುವೆ ಅಮ್ಮಾ…
ನಿನ್ನ ಸುತರ ಕಾಯುವೇ
ತಾಯೆ ಜನ್ಮ ದಾತೆಯೇ..2
ಮಡಿಲಲ್ಲಿ ಶಿರವಿಟ್ಟು ನಾನು ಮಲಗಿದೆ
ಕ್ಷಣದಲ್ಲೆ ಕಲ್ಲವ ಸವರಿದೇ…
ತನ್ನೊಳಗೆ ಗೆಲಿವಿನ ನಗುವು ಬೀರಿದೆ
ಬೆನ್ನಿಂದೆ ತಾಯಿಯ ಬಲವಿದೇ…
(ಹರಸುವೆ)