Haaduva Shruti Raagavu (ಹಾಡುವ ಶ್ರುತಿ ರಾಗವು)

ಮೇಲಿನ ವೀಡಿಯೋ ಈ ಹಾಡಿನ ಧಾಟಿ ತಿಳಿಯಲು ಮಾತ್ರ,…

ಧಾಟಿ :- ಯಾತ್ರಯಾಯಿ ಮರಭೂಮಿಯಿಲ್
➖➖➖➖➖➖
✍ಸಾಹಿತ್ಯ:- ನೌಶಾದ್ ಚಾರ್ಮಾಡಿ

ಹಾಡುವ ಶ್ರುತಿ ರಾಗವು ತಮಗಾಗಿಯೇ
ನಾಳಿನ ಸುವರ್ಗದ ಸರದಾರರೇ
ಕಾಣದ ನೆಬಿಯಾ ಮುಖ ಕಣ್ಣೆತಕೇ…
ಪ್ರಶಾಂತವು ಉಲ್ಲಾಸ ಕೇಂದ್ರದ ರಾಜರೇ..(2)

ಮನಗಳ ರಾಗ ಮೀಲಾದು ಬಂದಾಗ
ಮನಮನ ಮಿಡಿಯುವ ಅನುರಾಗ
ಕ್ಷಣಕ್ಷಣ ಸ್ವಾಧ ತ್ವಾಹರು ಎಂದಾಗ
ತನು-ಮನ ಸೆಳೆಯುವ ಮಧುರಾಗ(2)

ಪುಣ್ಯರಾಜರಾ ಮಣ್ಣು ಸವಿದಾಗ
ಸರ್ವ ಪಾಪಮೋಚನೆ ಸಿಗುವಾಗ(2)

ಸೂರ್ಯ ಪ್ರಕಾಶನೆಯೂ…
ಚಂದಿರ ನಾಚುವನೂ..
ಜಗಕೆಲ್ಲ ಮಾದರಿಯೂ
ಮುಸ್ತಫ ಸಯ್ಯಿದರು. (ಹಾಡುವ ಶ್ರುತಿ ರಾಗವು )

ಮಕ್ಕಾವೆಂಬ ನಾಡು ಜ್ಞಾನವಿಲ್ಲ ಕಾಡು
ಮನುಷ್ಯತ್ವ ಅರಿಯದ ಆ ನಾಡು
ಹೆಣ್ಣಿಗಿಲ್ಲ ಬಾಳು ಕೊಲೆ ಹತ್ಯೆ ಸೇಡು
ಕಥೆಯೆಲ್ಲ ವ್ಯಥೆಯಾದ ಆ ಪಾಡು

ಸರ್ವ ಸೃಷ್ಟಿ ಜಾಲಕೆ ಬೆಳಕಾಗಿ..
ಬಂದಿಲ್ಲಾ ಸುವಾಸನೆ ಸುಮಕಾಂತಿ.2
ಸದಾ ಹೂ ಹಸಿರಾಗಿ..ಜಗಕೆಲ್ಲ ಬೆಳಕಾಗಿ
ಮಂದಾರವೇ ಕಾಂತೀ…
ಪದಕಿಲ್ಲ ಸರಿಸಾಟಿ…..

Credit : Way To Madeena Whatsapp Group



Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy