ಅಲ್ಲಾಹ್ ……ಆಆಆ
ಅಲ್ಲಾಹ್ ,ನನ್ನ ನೋವುಗಳು
ಹತಾಶೆಯು ತುಂಬಿದ ದುಃಖ ಗಳು (2)
ಆಳವೇರಿದ ಕಡಲಲ್ಲಲೆಯುವ ದಿನ ರಾತ್ರಿಗಳು……
(ಅಲ್ಲಾಹ್)
ಕೇಳು ನನ್ನ ನೋವನ್ನು
ತೋರು ನನ್ನಲಿ ಕರುಣೆಯನು
ದಡ ಸೇರಲು ಚಾಚುವೆನು
ನನ್ನ ಬಡಪಾಯೀ ಕೈಗಳನು (2)
ಪಾಪದಲಿ ಮುಳುಗಿಹೆನು – ತಪ್ಪುಗಳ ಮಾಡಿಹೆನು
ಪರಿಪಾಲಕನೇ….ಮರೆತೋದೆನು
ಪರಿಪಾಲಕನೇ….ನಾ.. ಮರೆತೋದೆನು
ದುನಿಯಾದ ಮೋಸಗಳಿಂದ – ದರಿದ್ರ ಆ ನಿಮಿಷದಲ್ಲಿ
ದಯಾಮಹಿ ನೀ ಮನ್ನಿಸುವೆಯಾ
ಅಲ್ಲಾಹ್ ಆ ಆ ಆ ಆ ಆ
(ಅಲ್ಲಾಹ್)
ಹರಿಯುವ ಇರು ನಯನಗಳು
ಮನ ಮುಟ್ಟುವ ರೋದನೆಗಳೂ
ತಂಪೆರಗಳು ಬೇಡುತಿದೆ
ನನ್ನಯ ಪಾಪದ ಕೈಗಳು (2)
ಪರಲೋಕ ಚಿಂತೆಯಲಿ
ಪರಿಹಾರ ಬೇಡುತಿದೆ (2)
ನಡುಗುತ್ತಿದೆ ನನ್ನ ಹೃದಯಾಂತರ…..(೨)
ಸ್ವರ್ಗದ ಆ ಮೋಹಗಳು – ಕನಸಾಗಿ ಕಾಡುತಿದೆ
ಸಮದಾಯವನಲ್ಲಿ ಅರ್ಪಿಸಿದೆನಾ… (2)
ಅಲ್ಲಾಹ್ ಆಆ ಆ ಆ
ಅಲ್ಲಾಹ್ … ನನ್ನ ನೋವುಗಳು
ಹತಾಶೆಯು ತುಂಬಿದ ದುಃಖಗಳು (2)
ಆಳವೇರಿದ ಕಡಲಲ್ಲಲೆಯುವ ದಿನ ರಾತ್ರಿಗಳು
✍ಸಯ್ಯದ್ ಅಲವಿ ಸಖಾಫಿ ಗಂಗಾವಳಿ