ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ
ಮಣ್ಣಾಗುವ ಮುನ್ನ ಒಮ್ಮೆ ಯೋಚಿಸು
ದರ್ಪವ ತೋರದೆ ನಡೆ
ಮನದ ನೋವನು ಹೇಳಲು
ಆಗದೆ
ಮರಳು ನೀ ತೌಬದ ಕಡೆ
ಹೊತ್ತು ಹೆತ್ತ ತಾಯಿಗೆ
ನೋವ ನೀ ಮಾಡದೆ
ಬಂಧು ಮಿತ್ರರೊಂದಿಗೆ
ಸ್ನೇಹವ ಮುರಿಯದೆ
ಸಕಲ ಸಮಯ ರಬ್ಬಲಿ …ಬೇಡು ನೀ..
ರಾತ್ರಿ ಹಗಲು ನಲ್ಮೆಯ.. ಮಾಡು ನೀ…
ಯಾ ರಹೀಮೆ ರಹೀಮೆ ರಹೀಮೆ ಯಾ
ಯಾ ಅಲೀಮೆ ಅಲೀಮೆ ಅಲೀಮೆಯ
(ಮಣ್ಣಾಗುವ)
ಯೌವ್ವನದ ಸಮಯ ನನಗಂದು ತಿಳಿದಿಲ್ಲ
ಪಾಪವ ಮಾಡಿದೆನಾ
ಮನ್ನಿಸೆಯ ನಾಥಾ
ಚಿಂತನೆ ಮಾಡುವ ಕಾಲವೇ
ಮರೆತೆ ನಾ ಸತ್ಕರ್ಮ ಮಾಡದೆ
ಎಲ್ಲ ತಿಳಿವ ನಿನ್ನ ನಾಮವ ನೆನೆಯದೆ
ಕಣ್ಣೀರಲಿಂದು ನಾನು ಮರಣದ ಸಮಯದಿ
ಯಾ ರಹೀಮೆ ರಹೀಮೆ ರಹೀಮೆ ಯಾ
ಯಾ ಅಲೀಮೆ ಅಲೀಮೆ ಅಲೀಮೆಯ
(ಮಣ್ಣಾಗುವ)
ಆರಡಿ ಕಬರಲ್ಲಿ ಇರುಳಿನ ವ್ಯಥೆಯಲ್ಲಿ
ರಕ್ಷೆಯ ನೀಡು ನೀ
ಕರುಣೆಯ ಬೆಳಕಲ್ಲಿ
ಮಹ್ ಶರ ಮೈದಾನ
ಸುಡುಬಿಸಿಲಿನ ತಾಣ
ಅರಿಶಿನ ನೆರಳಲ್ಲಿ
ದಯಪಾಲಿಸು ರಾಜ
ನಡೆದೆನಾ ರಕ್ಷೆಯ ಬೇಡುತ
ಶಫಹತು ಸಿಗದೆ ಯಾರಲೂ
ಕಣ್ಮಣಿ ಹಬೀಬರ ಬಳಿಗೆ ನಾ ಬರುವಾಗ
ಮನ್ನಿಸಿ ಸ್ವರ್ಗವ ನೀಡು ನೀ ಯಾ ಅಲ್ಲಾಹ್
ಯಾ ರಹೀಮೆ ರಹೀಮೆ ರಹೀಮೆ ಯಾ
ಯಾ ಅಲೀಮೆ ಅಲೀಮೆ ಅಲೀಮೆಯ
(ಮಣ್ಣಾಗುವ)