ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ
Singer: Naufal Thirthahalli
Lyrics:Fathima Sana Ennehole, Shafa Fathima Shirlal
ತ್ವಾಹ ನೆಬಿಯವರನ್ನು ಕಾಣುವ ಹಂಬಲ….
ಈ ಪಾಪಿ ಹೃದಯವು ಇಂದು ಚಡಪಡಿಸಿದೆ…
ಎಂದೂ ಕಾಣುವೆನೂ ತಮ್ಮಯ ಮುಖವನ್ನು…
ನನ್ನ ಆತ್ಮವೂ ಪ್ರತಿದಿನವೂ ಕಾಯುತ್ತಿದೆ…
ತ್ವಾಹ ನೆಬಿಯುಲ್ಲಾರೇ…
ತಾಜಾ ರಸೂಲುಲ್ಲರೆ……
ನಿಮ್ಮನ್ನು ಕಾಣುವ ಆಸೆ ಮನ ತುಂಬಿದೆ…
ಆಸೆ ಮನ ತುಂಬಿದೆ …
ಆಸೆ ಮನ ತುಂಬಿದೆ (ತ್ವಾಹ ನೆಬಿಯವರನ್ನೂ)
ಒಂದು ಸಲ ನಿಮ್ಮ ನೋಡಿದರೆ ನಾ…
ಪಡೆಯುವೆನು ಸಾರ್ಥಕ ಜೀವನ…
ಪ್ರತಿದಿನವೂ ಮದ್ಹ್ ಹಾಡುತಲೇ…
ತಮ್ಮನ್ನು ಸ್ಮರಿಸಿ ನಾ ದುಃಖಿಸುವೇ….
ಈ ಪಾಪೀಯನ್ನು ಒಮ್ಮೆ ಸ್ವೀಕರಿಸುವಿರಾ….
ಈ ಆಸೆಯನ್ನು ಒಮ್ಮೆ ಪೂರೈಸುವಿರಾ…
ತ್ವಾಹ ನೇಬಿಯುಲ್ಲಾರೆ…
ತಾಜಾ ರಸೂಲುಲ್ಲಾರೆ…
ನಿಮ್ಮನ್ನು ಕಾಣುವ ಆಸೆ ಮನ ತುಂಬಿದೆ…
ಆಸೆ ಮನ ತುಂಬಿದೆ…
ಆಸೆ ಮನ ತುಂಬಿದೆ…( ತ್ವಾಹ ನೆಬಿಯವರನ್ನೂ)
ನನ್ನ ..ಜೀವನದಿ… ರೌಳವ ಕಾಣಲು…
ನನ್ನಯ ಕಣ್ಗಳು…ಹಾತೊರೆಯುತ್ತಿದೆ…
ದಿವ್ಯ ಸನ್ನಿಧಿಯನ್ನು ಕಂಡು ಮಣ್ಣಾಗುವ…
ಅರ್ಪಿಸು ಎನ್ನಲಿ ದೇವನೇ ಭಾಗ್ಯವ…
ಆ ಮಣ್ಣಲ್ಲಿ ಮಣ್ಣಾಗಿ ಹೋದರೆ ನಾ…
ನನ್ನ ಆತ್ಮಕ್ಕೆ ಸ್ವರ್ಗವ ಕರುಣಿಸು ನೀ…
ತ್ವಾಹ ನಿಬಿಯುಲ್ಲಾರೆ…
ತಾಜಾ ರಸೂಲುಲ್ಲಾರೇ…
ನಿಮ್ಮನ್ನು ಕಾಣುವ ಆಸೆ ಮನ ತುಂಬಿದೆ…
ಆಸೆ ಮನ ತುಂಬಿದೆ…
ಆಸೆ ಮನ ತುಂಬಿದೆ..
( ತ್ವಾಹ ನೇಬಿಯವರನ್ನೂ)