Nannede Koteya Sthanava (ನನ್ನೆದೆ ಕೋಟೆಯ ಸ್ಥಾನವ )

ಮುತ್ತು ರಸೂಲರೆ,, ಖಾತಿಮ್‌ ನೆಬಿಯರೇ,,,,,,
ಅಂತ್ಯ ಪ್ರವಾದಿ ನಬಿ ಮುಹಮ್ಮದ್‌ ಮುಸ್ತಫಾ …… (ಸ.ಅ)

ನನ್ನೆದೆ ಕೋಟೆಯ ಸ್ಥಾನವ ಪಡೆದ ಅಂತಿಮ ನಬಿಯವರೇ….
ನಿಮ್ಮ ಮದ್ದ್‌ ಹೇಳಲು ನನ್ನಯ ನಾಲಿಗೆ ತಾನೇ ಸೋಲುವುದು…
ತಳ ತಳ ರಬಿಅಲಿ ನೆನಪನು ಇರಿಸಿ ಚಿಮ್ಮುವ ಜಗದೊಳಗೆ…..
ನಿಮ್ಮ ಮದ್ದ್‌ ಹೇಳಲು ನನ್ನಯ ನಾಲಿಗೆ ಸೋಲನು ಒಪ್ಪುವುದು…

ನಿಮ್ಮಯ ಗಾನ ಮದ್ದ್‌ ಬರೆಯಲು ಆಸೆಯ ದಿನಕಳೆದೇ …
ಪದಗಳು ಬರದೇ ಸೋಲನು ಒಪ್ಪಿ ನಾನು ಕೀಳಾದೆ….
ಒಂದು ಹಾಡು ಸಾಲದು ಮದ್ದ್‌ ಹೇಳಲು..
ಪುಟಗಳು ಸಾಲದು ಬರೆಯಲು.

( ನನ್ನೆದೆ ಕೋಟೆಯ)

ಅಲ್ಲಾಹನಲಿ ಬೇಡುವೆ ನಾನು ಕಾಣಿಸು ಅವರ ರೌಳ
ಯಾರಬ್ಬೀ ….. ಅದನ್ಯಾವಾಗ ಕಾಣಿಸೋದು….?
ನಾ ಮಾಡೋ ದುವಾಗಳೆಲ್ಲ ನಾನಿಟ್ಟ ಆಸೆಗಳೆಲ್ಲಾ
ಯಾ ರಹೀಮ್‌….. ಅದನ್ಯಾರೂ ಪೂರಿಸೊರು….?

ಮಹ್‌ ಷರದಲಿ ಮಹ್ಮೂದ್‌ ಸ್ಥಾನ –
ಕೊಡುವೆನೆಂದು ಮಾಡಿದ್ದು ವಾದ
ಇವುಗಳೇನು ಕೊಡುವೆ ನಬಿಯವರಿಗೆಲ್ಲಾ ……

ಸ್ವರ್ಗದಲ್ಲಿ ಸ್ಥಾನವಿದೆ – ನನಗು ಒಂದು ಆಸೆ ಇದೆ
ಸದ್ಯ ಒಂದು ನೀಡು ನನಗೆ ಬೇರೇನೂ ಬೇಕೂ……

( ನನ್ನೆದೆ ಕೋಟೆಯ)

ನಬಿಗಾಗಿ ಹಾಡೋ ಮದ್‌ ಗೆ ಸರಿಸಾಟಿ ಇಲ್ಲವೆ ಇಲ್ಲ
ನಬಿದಿನಾ…… ಆದರೆ ನಾ ಹಾಡುವೆ…
ನಬಿಗಿರೋ ಸ್ಥಾನ ಆದರೂ ಬೆಲೆಯನ್ನು ಕಟ್ಟುವರಾರು
ಅವರಿಗೆ ಎಂದೆಂದೂ ಮದ್‌ ಹೇಳುವೆ…
ಸ್ನೇಹಿಸೋರು ಮದ್‌ ಹೇಳುವರು – ಮಹ್‌ ಷರದಲಿ ಕಾಣುವರವರ
ಮರೆಯದೆ ಹೌಲು ಅವರಿಗೆ ತಾನೇ……
ಹೌಲು ಎಂಬ ಕೌಸರೂ – ಶ್ರೇಷ್ಠ ಇದೆ ನೀರಿನಲ್ಲಿ
ಕುಡಿಯಬಹುದು ನಾಳೆ ಅಲ್ಲಿಯೇನೇ…..

( ನನ್ನೆದೆ ಕೋಟೆಯ)

✍ಸಯ್ಯದ್ ಅಲವಿ ಸಖಾಫಿ  ಗಂಗಾವಳಿ

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy