ಮನದಾಳದಾ ಮಧುರ ಮದ್ ಹನ್ನು
ವರ್ಣಿಸಲು ಬಲಹೀನನಾದೆನು ತ್ವಾಹ ರಸೂಲ್..
ತಿರು ಚಿಂತನೆಯಲ್ಲಿ ಶಕ್ತಿಯ ಪ್ರಜ್ವಲಿಸಿ
ಅಲ್ಲಾಹು ಕರುಣಿಸಿದ ಖಾತಿಮ್ ರಸೂಲ್
(ಮನದಾಳದಾ ಮಧುರ)
ವರ್ಣಿಸಲು ಬಲಹೀನನಾದೆನು ತ್ವಾಹ ರಸೂಲ್..
ತಿರು ಚಿಂತನೆಯಲ್ಲಿ ಶಕ್ತಿಯ ಪ್ರಜ್ವಲಿಸಿ
ಅಲ್ಲಾಹು ಕರುಣಿಸಿದ ಖಾತಿಮ್ ರಸೂಲ್
(ಮನದಾಳದಾ ಮಧುರ)
ತಿರು ಮಣ್ಣು ಸನಿಹ ನನ್ನ ಶರೀರ
ಮುಟ್ಟುವ ಮೊಹವು ಬಾನೆತ್ತರ
ಪುಣ್ಯ ಮದೀನ ಲೊಕಕ್ಕೆ ಕಿರಣ
ತಲುಪಿದರೆ ಹೊಂದುವೆ ಅಲ್ಲಿ ಮರಣ
ಕಾರುಣ್ಯ ಕಡಲೆ ಸನಿಹಕ್ಕೆ ಬರಲೆ
ತಡೆದಿದೆ ದೊಷಗಳು ತಿರುದಾರಿ ಮದ್ಯೆ
ಹಲವಾರು ವರುಷ ಹಾಡುವೆನು ಮದ್ ಹಾ
ದೊಷಿಯ ಶಬ್ದ… ನಿಲ್ಲುವಿಕೆ ತನಕ
(ಮನದಾಳದಾ ಮಧುರ)
ಹೊರಡಲೆ ಬೇಕು ತಿರುಯಾತ್ರೆಗೆಂದು
ಮರಣಕ್ಕೆ ಮುಂಚಿತ ಒಂದು ಬಾರಿ
ಪರಲೊಕದಲ್ಲಿ ಪರರಲ್ಲಿ ರಕ್ಷೆ..
ಬೇಡುವ ಸಮಯ-ನಿಮ್ಮಾ ನಿರಿಕ್ಷೆ…
ತುಲಾಸ್ ತೂಕ ಸರಿ-ತಪ್ಪು ಅಂಕ
ದೊಷಗಳು ಅಧಿಕ….ಗೊಂಡರೆ ನರಕ
ನರಕಾಗ್ನಿಜ್ವಾಲೆ ನನ್ನೆದೆಯ ಮೇಲೆ..
ಉರಿಯುವ ವೇಳೆ ಅಭಯಾರಸೂಲೆ
(ಮನದಾಳದಾ ಮಧುರ)