Jeevitaavadi Yeste Irali (ಜೀವಿತಾವಧಿ ಎಷ್ಟೇ ಇರಲಿ)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ಜೀವಿತಾವಧಿ ಎಷ್ಟೇ ಇರಲಿ.. ಕಷ್ಟನಷ್ಟಗಳೆಷ್ಟೇ ಬರಲಿ..
ದೃಷ್ಟಿಗಿಷ್ಟ ನಿನ್ನ ದಾಸರಷ್ಟೇ ಯಾಗಿರಲಿ..

ಅಂದು ಬದುಕಿದ ಪುಣ್ಯ ಸ್ವಹಾಬ..
ಇಂದು ನಮಗೆ ಅವರೂ ಗಾಬ..
ಹೇಳಲೆನ್ನ ದುಃಖವನ್ನ ಯಾ ರಸೂಲಲ್ಲಾ..

ಮರ್ ಹಬ ಮರ್ ಹಬ ಯಾ ರಸೂಲಲ್ಲಾ..
ಮರ್ ಹಬ ಮರ್ ಹಬ ಯಾ ರಸೂಲಲ್ಲಾ.. (ಜೀವಿತಾವಧಿ)

ಮನಸಿನ ಅಂತರಾಳದಲ್ಲಿ..
ಪ್ರೀತಿಯ ನೀಡು ನೆಬಿಯರಲ್ಲಿ..
ಕರುಣೆಯ ಅರುಣ ಕಿರಣವ ತರುಣಿಸು ನೀನು ಕರುಣೆಯ ಅರಸನೆ..(2)

ಪುಣ್ಯ ನೆಬಿಯರ ಗೀತೆಯ ಹಾಡಿ..
ಕೈಗಳೆತ್ತಿ ನಿನ್ನಲಿ ಬೇಡಿ..
ಹಗಲು ಹಲವು ಇರುಳು ಕೂಡಿ
ಕಾಲವು ಕಳೆಯುತಿದೆ..

(ಜೀವಿತಾವಧಿ)

ತಂದೆಯ ಬೆನ್ನಿನಿಂದಲೇ ನಾ..
ತಾಯಿಯ ಹೊಟ್ಟೆಗೋಗೋ ದಿನಾ..
ಅದಕ್ಕೂ ಮುಂಚೆಯೇ ನೀನು ಮುಅಮಿನಾಗಿಸಿದೆ  ನಮ್ಮನೆಲ್ಲರನ್ನಾ.. (2)

ಆದರೊಂದು ದುಃಖದ ಮಾತು..
ನೆಬಿಯ ಕಾಲ ಕಳೆದು ಹೋಯ್ತು ..
ಕಣ್ ಗಳಲ್ಲಿ ಕಣಗಳನ್ನು ಕಾಣಿಸು ಈ ಹೊತ್ತು..

(ಜೀವಿತಾವಧಿ)

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy